ಶಿವಮೊಗ್ಗ : ತಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿರುವ ಮೃಗಲಾಯದ ಹಕ್ಕಿಗಳ ಪೋಷಣೆಗಾಗಿ ಒಂದು ವರ್ಷದ ಅವಧಿಗೆ ಫ್ರೀಡಂ ಪಾರ್ಕ್ ನ ವಾಯುವಿಹಾರಿಗಳು ದತ್ತು ತೆಗೆದು ಕೊಂಡಿದ್ದಾರೆ. ಸಿಂಹ ಧಾಮದಲ್ಲಿರುವ ಪ್ರಾಣಿಗಳ ಸಾಕಲು ಸಾರ್ವಜನಿಕ ರು ದತ್ತು ತೆಗೆದು ಕೊಳ್ಳ ಬಹುದಾಗಿದೆ.ಅದಕ್ಕಾಗಿ ಧನ ಸಹಾಯ ಮಾಡಿ ದತ್ತು ಸ್ವಿಕಾರ ಮಾಡ ಬಹುದು.

ನಗರದ ಅಲ್ಲಮಪ್ರಭು ಉದ್ಯಾನವನ( ಫ್ರೀಡಂ ಪಾರ್ಕ್) ವನದ ವಾಯುವಿಹಾರಿಗಳು ಹಕ್ಕಿಗಳ ಪೋಷಣೆಗಾಗಿ ಧನ ಸಹಾಯ ಮಾಡಿ ದತ್ತು ತೆಗೆದು ಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಾಯುವಿಹಾರಿಗಳಾದ ಹೆಚ್.ಹೆಚ್. ನಾಗೇಶ್, ಮಂಜುನಾಥ್, ವೈ.ಹೆಚ್. ನಾಗರಾಜ್, ಗಜೇಂದ್ರ,
ಪಿಓ ಶಿವಕುಮಾರ್, ಅಂಜೂನ್, ಗೋವರ್ಧನ, ನಾಗೇಂದ್ರ, ಎಇಇ ಮಂಜುನಾಥ್, ಇದ್ದರು. ಇವರಿಗೆ ಆರ್ಎಫ್ಓ ನಾಗೇಶ್, ಅಧಿಕಾರಿಗಳಾದ ಸುರೇಂದ್ರ, ಸೌಮ್ಯ ಪ್ರಮಾಣ ಪತ್ರನೀಡಿ ಅಭಿನಂದನೆ ಸಲ್ಲಿಸಿದರು.