ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರು ಕೊರೊನಾ ಮಹಾಮಾರಿಯಿಂದ ಕಂಗಾಲಾಗಿದ್ದು ಈಗ ಬ್ಲಾಕ್ ಫಂಗಸ್ ಕೂಡಾ ವಕ್ಕರಿಸಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಗುರುವಾರ ಮೆಗ್ಗಾನ್ ನಲ್ಲಿ 6 ಜನರಲ್ಲಿ ಬ್ಲಾಕ್ ಫಂಗಸ್ ಶಂಕೆ ಇದ್ದು ಇಬ್ಬರಲ್ಲಿ ಫಂಗಸ್ ದೃಢಪಟ್ಟಿದ್ದು ಒಟ್ಟು 11ಜನರಲ್ಲಿ ಫಂಗಸ್‌ನ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಶುಕ್ರವಾರ 11 ಜನರಲ್ಲಿ ಫಂಗಸ್ ಶಂಕೆ ಇದ್ದು, ಮೂವರಲ್ಲಿ ಫಂಗಸ್ ವೈರಸ್ ಧೃಢಪಟ್ಟಿದೆ. ಧೃಢಪಟ್ಟ ಮೂವರಲ್ಲಿ ಒಬ್ಬರು ಫಂಗಸ್‌ಗೆ ಬಲಿಯಾಗಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ.
ಸಿಮ್ಸ್‌ನಲ್ಲಿ ಚಿಕಿತ್ಸೆ:
ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ ಕೊಡುವ ರಾಜ್ಯದ ಆರು ಕೇಂದ್ರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕ ವಿಭಾಗ ಮಾಡಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಸಿಮ್ಸ್‌ನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಧರ್ ಅವರು ಬ್ಲಾಕ್ ಫಂಗಸ್ ವಿಭಾಗದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.