ಶಿವಮೊಗ್ಗ : ಗೋಪಾಳಗೌಡ ಬಡಾವಣೆಯಲ್ಲಿರುವ ಚಂದನವನ ಪಾರ್ಕ್ನಲ್ಲಿ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹು ಉಪಯೋಗಿ ಜಿಮ್ನ್ನು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಇಂದು ಬೆಳಿಗ್ಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸೂಡಾ ವ್ಯಾಪ್ತಿಯಲ್ಲದೆ ನಗರದಲ್ಲಿರುವ ಇತರ ಎಲ್ಲಾ ಪಾರ್ಕ್ಗಳನ್ನು ಅಭಿವೃದ್ಧಿಗೊಳಿಸಲು ಸೂಡಾ ಈಗಾಗಲೇ ತೀರ್ಮಾನಿಸಿ 40 ಪಾರ್ಕ್ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇನ್ನೂ 50 ಪಾರ್ಕ್ಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಾಗಲೇ 50 ಸಾವಿರ ಗಿಡಗಳನ್ನು ನೆಡಲಾಗಿದೆ. 20ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಲಾಗಿದೆ. ನಗರದ ಸೌಂದರ್ಯಕ್ಕೆ ಉದ್ಯಾನವನಗಳು ಅತೀ ಅವಶ್ಯಕ ಎಂದರು.

ಚಂದನವನ ಪಾರ್ಕ್ನಲ್ಲಿ ವ್ಯಾಯಾಮಕ್ಕೆ ಅನುಕೂಲವಾಗುವಂತೆ ಹೊಸ ಉಪಕರಣಗಳ ಜೊತೆಗೆ ಹಳೆಯ ಯಂತ್ರಗಳನ್ನು ದುರಸ್ತಿಗೊಳಿಸಿ ನಿರ್ಮಿಸಲಾಗಿದೆ. ಇಂದು ಆರೋಗ್ಯ ಅತೀ ಮುಖ್ಯ. ಸಾರ್ವಜನಿಕರು ಇದರ ಸದುಪಯೋಗಿ ಪಡೆದುಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಆರೋಗ್ಯವಂತರಾಗಿ ಮುಂದಿನ ದಿನಗಳಲ್ಲಿ ಈ ಪಾರ್ಕಿಗೆ ಬೇಕಾದ ಕಲ್ಲು ಬೆಂಚುಗಳನ್ನು ಕೂಡ ಹಾಕಿಸಲಾಗುವುದು ಎಂದರು.

ಪಾರ್ಕಿನ ಗೌರವ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ನಗರದ ಪಾರ್ಕ್ಗಳಿಗೆ ಜೀವಕೊಟ್ಟಿದ್ದಾರೆ. ಈ ಪಾರ್ಕಿನ ಸದಸ್ಯರುಗಳು ಹೆಚ್ಚಿನ ಶ್ರಮಪಟ್ಟಿದ್ದಾರೆ. ವಿದ್ಯುತ್ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳಿವೆ. 2ನೇ ಹಂತದ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪನವರು ಅನುದಾನ ನೀಡಲು ಒಪ್ಪಿದ್ದಾರೆ ಎಂದರು.
ಪಾರ್ಕಿನ ಅಧ್ಯಕ್ಷ ಜಯಕುಮಾರ್ಗೌಡ್ರು, ಹಿಂದುಳಿದ ವರ್ಗಗಳ ರಾಜ್ಯ ಸಂಚಾಲಕ ಜಿ.ಡಿ. ಮಂಜುನಾಥ್, ಮೆಸ್ಕಾಂ ಸಲಹಾಸಮಿತಿ ಸದಸ್ಯ ಆರ್. ರಾಜಶೇಖರ್ ಸೇರಿದಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾರ್ಕಿನ ಕ್ರೀಡಾ ವಿಭಾಗದ ಕಾರ್ಯದರ್ಶಿ ಶಿವಕುಮಾರ್, ಪ್ರಮುಖರಾದ ರೈಲ್ವೆ ಪ್ರಸಾದ್, ರವಿಕುಮಾರ್, ಅಶೋಕ್, ಶಾಂತಕ್ಕ, ಸ್ವರ್ಣ ಸೇರಿದಂತೆ ಹಲವರಿದ್ದರು.