ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿ ವತಿಯಿಂದ ನ. ೨೦ರಂದು ಕೊನೆಯ ಕಾರ್ತೀಕೋತ್ಸವ ಏರ್ಪಡಿಸಲಾಗಿದೆ.
ನ. ೨೦ ರ ಗುರುವಾರ ಕಡೇ ಕಾರ್ತಿಕದ ಪ್ರಯುಕ್ತ ಬೆಳಗ್ಗೆ ೯ ಗಂಟೆಗೆ ದುರ್ಗಾಹೋಮ, ಮಧ್ಯಾಹ್ನ ೧೨ ಕ್ಕೆ ಪೂರ್ಣಾಹುತಿ,

ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ. ಸಂಜೆ. ೬ ಗಂಟೆಗೆ ಗಂಟೆಗೆ ಪ್ರಕಾರೋತ್ಸವ ಮತ್ತು ೭:೩೦ಕ್ಕೆ ಉಯ್ಯಾಲೆ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಅಂದು ಸಂಜೆ ೬ ಗಂಟೆಗೆ ಶತೃವಿನಾಶಕವೂ, ಸೌಭಾಗ್ಯಕರವೂ, ಸರ್ವ ಮಂಗಳಕರವಾದ ದುರ್ಗಾದೀಪ ನಮಸ್ಕಾರ ನಡೆಯುವುದು. ಈ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.

ದೀಪೋತ್ಸವ ಹಾಗೂ ಸರ್ವಸೇವೆ, ಪ್ರಾಕಾರೋತ್ಸವ, ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ಮತ್ತು ಇತರೆ ಸೇವೆಗಳ ಬಗ್ಗೆ ದೇವಸ್ಥಾನದ ಕೌಂಟರ್ನಲ್ಲಿ ವಿಚಾರಿಸಿ, ದೀಪೋತ್ಸವಕ್ಕೆ ಎಣ್ಣೆ ಬತ್ತಿ ಮತ್ತು ಪ್ರಸಾದ ವಿನಿಯೋಗಕ್ಕೆ ಅಕ್ಕಿ, ಬೆಲ್ಲ, ಹಾಲು, ಮೊಸರು, ತುಪ್ಪ ಇತರೆ ಸಾಮಗ್ರಿಗಳನ್ನು ತಂದು ಸೇವಾ ಕೌಂಟರ್ನಲ್ಲಿ ಕೊಡಬಹುದು.