ಹೊಸನಗರ: ೧೮ವರ್ಷಕಿಂತ ಮುಂಚಿತವಾಗಿ ಅಪ್ರಾಪ್ತ ಬಾಲಕೀಯರ ಮೇಲೆ ದೈಹಿಕ ದೌರ್ಜನ್ಯ ನಡೆಸಿದರೆ ಗಂಡು ಹಣ್ಣು ಒಪ್ಪಿಗೆಯಿಂದ ಲೈಂಗಿಕ ಕ್ರೀಯೇಯಲ್ಲಿ ಭಾಗಿಯದರೇ ಅಂತವರ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ೭ವರ್ಷದಿಂದ ಜೀವನ ಪರಿಯಂಥ ಜೈಲಿನಲ್ಲಿರಬೇಕಾಗುತ್ತದೆ ಎಂದು ಹೊಸನಗರದ ಖ್ಯಾತ ವಕೀಲ ವೈ.ಪಿ. ಮಹೇಶ್ರವರು ಹೇಳಿದರು.

ಹೊಸನಗರದ ಜೂನಿಯರ್ ಕಾಲೇಜಿನ ಪ್ರೌಡ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರೌಡ ಶಾಲೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರರವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಎರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಕಾನೂನು ಅರಿವಿನಲ್ಲಿ ಮಾತನಾಡಿದರು.

ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದ ಹಾಗೇ ಮಕ್ಕಳನ್ನು ಶಿಕ್ಷಕರು ಇವರನ್ನು ಯಾವ ರೀತಿಯಲ್ಲಿಯಾದರೂ ಹೇಗದರೂ ಬಳಸಿಕೊಳ್ಳಬಹುದು ಅವರನ್ನು ಭಾರತ ದೇಶದ ಉತ್ತಮ ಪ್ರಜೆಯನ್ನಾಗಿ ಮಾರ್ಪಡಿಸುವ ಗುಣ ಶಿಕ್ಷಕ ವರ್ಗದವರದ್ದಾಗಿರುತ್ತದೆ ಎಂದು ಪ್ರೌಡ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ ಈ ವಯಸ್ಸಿನಲ್ಲಿಯೇ ತಿದ್ದುವ ಜಾವಾಬ್ದಾರಿ ಶಿಕ್ಷಕರ ಹಾಗೂ ಪೋಷಕರ ಮೇಲಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಆಡುತ್ತಾ ಮಾದಕ ವಸ್ತುಗಳನ್ನು ಸೇವಿಸುವಾಗ ತುಂಬಾ ಸಂತೋಷವಾದರೂ ನಂತರ ಮನುಷ್ಯನ ಮೆದುಳಿನ ಮೇಲೆ ಹಾಗೂ ದೇಹದ ಸಹಜ ಕಾರ್ಯ ವ್ಯತ್ಯಾಸಗೊಳಿಸಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಮನುಷ್ಯರ ಮನಸ್ಥಿತಿ ಆಲೋಚನಾ ಶಕ್ತಿ ಮತ್ತು ವರ್ತನೆಗಳನ್ನು ದುರ್ಬಲಗೊಳಿಸುತ್ತದೆ ಆದ್ದರಿಂದ ಮಾದಕ ವಸ್ತುಗಳ ಸೇವನೆ ಮಾಡಬೇಡಿ ಗಾಂಜಾ ಅಫೀಮು, ಕೊಕೇನ್ ಚರಸ್, ಹೆರಾಯಿನ್ ಅಥವಾ ಇತರೆ ವಸ್ತುಗಳಿಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಅಲ್ಲದೇ ಅಂತಹ ಡ್ರಗ್ಸ್ಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು ಸೇವಿಸುವುದು ಮಾರುವುದು ಖರೀದಿಸುವುದು ಸಾಗಿಸುವುದು ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ನಶೆ ಏರುವ ಟ್ಯಾಬ್ಲೇಟ್ ಅಥವಾ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬೇಡಿ ಕ್ಷಣಿಕ ಸುಖ ನೀಡುವ ಮೊಹಕ್ಕೆ ಬಿದ್ದು ಸುಂದರ ಜೀವನ ಹಾಳು ಮಾಡಿಕೊಳ್ಳಬೇಡಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ತಿಳಿದ ತಕ್ಷಣ ಅವರ ಪಾಲಕರಿಗೆ ವಿಷಯ ಮುಟ್ಟಿಸಿ ಸಾಧ್ಯವಾದರೇ ಪುನಶ್ಚೇತನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದುಶ್ಚಟವನ್ನು ಬಿಡಿಸಲು ಪ್ರಯತ್ನಿಸಿ ಇದರ ಜೊತೆಗೆ ಸಮಾಜವನ್ನು ಮಾದಕ ವಸ್ತುಗಳ ವ್ಯಸನ ಮತ್ತು ಸಾಗಾಟದ ಪಿಡುಗುಗಳಿಂದ ಮುಕ್ತಗೊಳಿಸಲು ಸಹಕರಿಸಿ ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷನಾಧಿಕಾರಿಗಳಾದ ಕರಿಬಸಮ್ಮನವರು ಈ ಸಂದರ್ಭದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ರವರು ವಹಸಿದ್ದು ಮುಖ್ಯ ಶಿಕ್ಷಕ ರೇಣುಕೇಶ್, ಮದುಸೂದನ್, ಜಯಮ್ಮ, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.