ಶಿವಮೊಗ್ಗ, ನ.07:
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ರಾಷ್ಟ್ರಜಾಗೃತಿ ಗೀತೆಯಾಗಿ ಬಳಕೆಯಾಗಿದ್ದ ಬಂಗಾಳಿ ಸಾಹಿತಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ “ವಂದೇ ಮಾತರಂ” ಗೀತೆ 150 ವರ್ಷ ಪೂರೈಸಿದ ಹಿನ್ನೆಲೆ ದೇಶಾದ್ಯಂತ ಸ್ಮರಣಾರ್ಥಕ ಕಾರ್ಯಕ್ರಮಗಳನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ರವರು ಕರೆ ನೀಡಿದ್ದು, ಅದರಂತೆ ಶಿಮುಲ್ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರದ ಇಂದು ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ.ಶೇಖರ್ ರವರು ಉಪಸ್ಥಿತರಿದ್ದರು.