ಶಿಕಾರಿಪುರ. ಮನುಷ್ಯ ಯಾವತ್ತೂ ಜನಮನದಲ್ಲಿ ಚಿರಸ್ಥಾಯಿಯಾಗಿ ಇರುವದು
ಅವನ ಸಾಮಾಜಿಕ ಕಳಕಳಿಯಿಂದ ಒಳ್ಳೆಯ ಗುಣ ಗಳಿಂದ ಈ ನಿಟ್ಟಿನಲ್ಲಿ ನಟ ದಿ, ಪುನೀತ್ ರಾಜ್ಕುಮಾರ್ ಪ್ರತ್ಯಕ್ಷ ಉದಾಹರಣೆಯಾಗಿದ್ದರು ಎಂದು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ಸಂಚಾಲಕ ಇ ಹೆಚ್, ಬಸವರಾಜ್ ಹೇಳಿದರು
ಬಸ್ ನಿಲ್ದಾಣ ದ ಪಕ್ಕದ ಪುನೀತ್ ರಾಜ್ ಕುಮಾರ್ ರಸ್ತೆಯ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ಮಾತ ನಾಡಿದ ಅವರು ಪುನೀತ್ ರಾಜ್ಕುಮಾರ್ ಕೇವಲ ನಟರಾಗಿ ತಮ್ಮನ್ನು ಗುರ್ತಿಸಿಕೊಳ್ಳಲಿಲ್ಲ. ಚಿತ್ರರಂಗದ ಹೊರಗಿನ ಪ್ರಪಂಚದ ಕಡೆಗೂ ಗಮನಹರಿಸಿದರು ವೃಧ್ದಾಶ್ರಮ ಸೇರಿದಂತೆ ಅಬಲರಿಗೆ, ಶೋಷಿತರಿಗೆ ಆಶ್ರಮಗಳಿಗೆ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದವರು ಎಂದರು

ವರನಟ ಡಾ, ರಾಜ್ ಕುಮಾರ್ ಅವರ ಮಗನಾದರೂ
ಅವರು ಅವರಿಗಿಂತ ಭಿನ್ನವಾಗಿ ಬೆಳೆದರು. ಯಾವದೇ ರೀತಿಯ ಅಹಂಕಾರದ ಅಂಗಳಕ್ಕೆ ಜಾರಿಕೊಳ್ಳದೇ ಒಬ್ಬ ಸಹೃದಯಿ ನಟನಾಗಿ ಬಾಳಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿ ಮಿಂಚಿ ಮರೆಯಾದರು. ಅವರು
ಯಾವಾಗಲೂ ಜನತೆಯ,ಅಭಿಮಾನಿಗಳ ಹೃದಯ ಸಿಂಹಾಸನ ರಾಜನೇ ಎಂದು ಹೇಳಿದರು.

ವೈಭವ್ ಬಸವರಾಜ್. ರಾಜ್ಕುಮಾರ್, ಧನರಾಜ್, ವಿಠ್ಠಲ ಮಹೇಂದ್ರಕರ್, ಸುಬ್ರಹ್ಮಣ್ಯ. ಪ್ರದೀಪ್. ಸುದರ್ಶನ್. ಸಲೀಂ. ಸೇರಿದಂತೆ ಹಲವಾರು ಅಭಿಮಾನಿಗಳು ಭಾಗಿಯಾಗಿದ್ದರು.
ಪುಣ್ಯಸ್ಮರಣೆಯ ನಿಮಿತ್ತ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
30 skp 1
ಪುನೀತ್ ರಾಜ್ಕುಮಾರ್ 4 ನೇ ಪುಣ್ಯಸ್ಮರಣೆ ಪ್ರಯುಕ್ತ
ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಗದ ವೈಭವ್ ಬಸವರಾಜ್. ರಾಜ್ಕುಮಾರ್, ಧನರಾಜ್, ವಿಠ್ಠಲ ಮಹೇಂದ್ರಕರ್, ರಘು.ಸುಬ್ರಹ್ಮಣ್ಯ. ಪ್ರದೀಪ್. ಸುದರ್ಶನ್. ಸಲೀಂ. ಗಿಡ್ಡಪ್ಪ. ರವಿ. ಅರುಣ್ ಸೇರಿದಂತೆ ಹಲವಾರು ಅಭಿಮಾನಿಗಳು ಭಾಗಿಯಾಗಿದ್ದರು.