ಶಿವಮೊಗ್ಗ : ಕರ್ನಾಟಕ -ಗೋವಾ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕದ ವಿರುದ್ಧ ಗೋವಾ ಎಂದು ಎರಡನೇ ಇನಿಂಗ್ಸ್ ಆರಂಭಿಸಿದೆ.

ನಗರದ ನವುಲೆಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಕ್ಕೆ ಮಳೆಯ ಕಣ್ಣ ಮುಚ್ಚಾಲೆ ಆಟ ನಡೆದಿದೆ. ಮೋಡ ಕವಿದ ವಾತಾವರಣದ ನಡುವೆಯೇ ಪಂದ್ಯ ನಿರಾತಂಕವಾಗಿ ನಡೆಯುತ್ತಿದ್ದು, ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ತಂಡ ೧೧೦ ಓವರ್ ಗಳಲ್ಲಿ, ೩೭೧ ರನ್ ಕಲೆ ಹಾಕಿ, ಗೋವಾ ತಂಡಕ್ಕೆ ಸವಾಲೊಡ್ಡಿತ್ತು. ಈ ಸವಾಲು ಸ್ವೀಕರಿಸಿದ ಗೋವಾ ೮೭.೨ ಓವರ್ ಗಳಲ್ಲಿ, ೨೧೭ ರನ್ ಗಳಿಸುವಲ್ಲಿ ಹರಸಾಹಸಪಟ್ಟಿತ್ತು.

ಮಂಗಳವಾರ ಫಾಲೋ ಆನ್ ಪಡೆದ ಗೋವಾ ಎರಡನೇ ಇವ್ನಿಂಗ್ಸ್ ನಲ್ಲಿ ಮಧ್ಯಾಹ್ನ ೨ ಗಂಟೆಯ ವೇಳೆಗೆ ೩೧ ಪಾಯಿಂಟ್ ೧ ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ೮೧ ರನ್ ಗಳಿಸಿದೆ. ಆರಂಭಿಕ ಆಟಗಾರರಾಗಿ ಮಂಥನ್ ಮತ್ತು ಸುಯಸ್ ಕಣಕ್ಕಿಳಿದಿದ್ದರು. ಇವರಲ್ಲಿ ೧೩ ರನ್ ಗಳಿಸಿ ಸುಯೆಸ್ ಅವರು ವೈಶಾಖಗೆ ವಿಕೆಟ್ ಒಪ್ಪಿಸಿದರು ಮಂತನ್ ೩೨ ರನ್ಗಳಿಸಿ ಆಟ ಮುಂದುವರೆಸಿದ್ದಾರೆ ಜೊತೆಯಾಗಿ ಅಭಿನವ್ ೩೦ ರನ್ಗಳಿಸಿ ಆಟವಾಡುತ್ತಿದ್ದಾರೆ.