ಮೋದಿಯಿಂದ ವಿದೇಶಕ್ಕೆ ಲಸಿಕೆ ರವಾನೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಶಿವಮೊಗ್ಗ: ಪ್ರಧಾನಿ ಮೋದಿಯವರೆ ನಮ್ಮ ದೇಶದ ವ್ಯಾಕ್ಸಿನ್‌ನನ್ನು ಏಕೆ ವಿದೇಶಕ್ಕೆ ಕಳುಹಿಸಿದಿರಿ ಎಂಬ ಆಗ್ರಹದ ಪ್ರಶ್ನೆಯ ಪೋಸ್ಟರ್ ಅಂಟಿಸಿದ ೧೫ ಜನರನ್ನು ಹೇಡಿ ಸರ್ಕಾರ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಶಿವ ಮೂರ್ತಿ ವೃತ್ತದಲ್ಲಿ ಪೋಸ್ಟರ್‌ಗಳನ್ನು ಹಿಡಿದು ನಮ್ಮನ್ನು ಸಹ ಬಂಧಿಸಿ ಎಂದು ಆಗ್ರಹಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.
ಭಾರತ ಸರ್ಕಾರ ತನ್ನ ದೇಶದ ಜನರ ಜೀವಗಳನ್ನು ಪಣಕ್ಕಿಟ್ಟು ವಿದೇಶಿ ಜನರ ರಕ್ಷಣೆಗಾಗಿ ಹೊರಟಿರುವುದು ಅತ್ಯಂತ ಖಂಡನಿಯ. ಬಹುಶಃ ಪ್ರಧಾನಿ ಮೋದಿ ವಿದೇಶಗಳಲ್ಲಿಯೇ ಹೆಚ್ಚು ತಿರುಗಾಡುತ್ತಿದ್ದರ ಪರಿಣಾಮವಿದು. ವಿದೇಶಕ್ಕೆ ಲಸಿಕೆ ನೀಡು ತ್ತಿರುವುದಕ್ಕೆ ಮೋದಿ ಮತ್ತು ಅವರ ಭಕ್ತರು ಹೇಳುವ ರೀತಿಯಂತೂ ಅಸಹ್ಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜನರು ಲಸಿಕೆ ತೆಗೆದು ಕೊಳ್ಳಲಿಲ್ಲ ಏನು ಮಾಡೋಣ, ವಿರೋಧ ಪಕ್ಷಗಳು ಅಡ್ಡಿಪಡಿಸಿ ದವು ಎಂತಹ ಮಾತು ಇದು. ಇದೇ ಸರ್ಕಾರ ಜನರಿಗೆ ನೀವು ಜಾಗಟೆ ಬಾರಿಸಲು, ಶಂಖ ಊದಲು ಹೇಳಿದ್ದು. ನೀವು ಲಸಿಕೆ ಹಾಕಿಸಿ ಕೊಳ್ಳಬೇಕು ಎಂದರೆ ಹಾಕಿಸಿ ಕೊಳ್ಳದೇ ಜನರು ಇರುತ್ತಿದ್ದರೇ…? ಇಂತಹ ಬೊಗಳೆ ಮಾತುಗಳನ್ನು ಬಿಡಿ ಎಂದು ಆಗ್ರಹಿಸಿದರು.
ಲಸಿಕೆ ಹಾಕಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು. ಪ್ರಧಾನ ಮಂತ್ರಿಗಳೇ ಇಂತಹ ಕ್ಷುಲ್ಲಕ ಕಾರಣಗಳ ಬಿಡಿ. ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಆಡಬೇಡಿ. ವಿದೇಶಕ್ಕೆ ಲಸಿಕೆ ಕಳಿಸುವುದು ನಮ್ಮ ದೇಶಕ್ಕೆ ಸಾಕಾ ಗುವಷ್ಟು ಇಟ್ಟುಕೊಂಡು ಕಳುಹಿಸಬೇಕು. ಈಗಾಗಲೇ ದೇಶವ್ಯಾಪಿ ಲಕ್ಷಾಂತರ ಜನ ಸಾಯುತ್ತಿದ್ದಾರೆ ಅದರಂತೆ ಕರ್ನಾಟಕದಲ್ಲೂ ಸಹ ಹತ್ತು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದು ಅಂತಹ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ದೇಶದ ಜನರೆಲ್ಲಾ ಇದೆ ಪ್ರಶ್ನೆ ಕೇಳುತ್ತೀವಿ ಎಲ್ಲರನ್ನೂ ಬಂಧಿಸುವ ತಾಕತ್ತಿದೆಯಾ? ಹಾಗಾದರೆ ಮೊದಲು ನಮ್ಮನ್ನು ಬಂಧಿಸಿ ಎಂಬ ಅಭಿಯಾನವನ್ನು ಈ ನಿರ್ಲಕ್ಷಿತ ಸರ್ಕಾರದ ವಿರುದ್ಧ ದೇಶ ಹಾಗೂ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಆರಂಬಿ ಸಿದ್ದು, ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್,, ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಉತ್ತರ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಈ.ಟಿ.ನಿತಿನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಎಸ್. ಕುಮರೇಶ್, ಮುಖಂಡ ಆರ್.ಕಿರಣ್,ಪವನ್, ಗಗನ್ ಗೌಡ, ಶರತ್ ಇತರರು ಭಾಗವಹಿಸಿದ್ದರು.