ಶಿವಮೊಗ್ಗ, ಅ.10:
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರೇ ಅಪಘಾತ ತಪ್ಪಿಸಲು, ಹಾಗೂ ರಸ್ತೆ ಸುರಕ್ಷತೆಗೆ ಮುಂದಾಗಿ ಸಿಮೆಂಟ್, ಜಲ್ಲಿ, ಮರಳು, ಸಿಮೆಂಟ್ ಬಾಕ್ಸ್ ತಂದು ತಾವೇ ಖರನೆ ಹಿಡಿದು ಕೆಲಸ ಮಾಡಿ ಜನರ ಪ್ರಶಂಸೆಗೆ ಪಾತ್ರವಾಗಿದ್ದು ವಿಶೇಷ.


ನಿನ್ನೆ ರಾತ್ರಿ ನೂರಡಿ ರಸ್ತೆ ಅಲ್ಲಮಪ್ರಭು (ಫ್ರೀಡಂಪಾರ್ಕ್) ಮೈದಾನದ ಎದುರು ಚಿಕ್ಕದಾಗಿ ಟೂ ವ್ಹೀಲರ್ ಹೋಗುವಂತಿದ್ದ ಡಿವೈಡರ್ ಮುಚ್ಚಿದ್ದಾರೆ. ಈ ಡಿವೈಡರ್ ನಿಂದ ನಿತ್ಯ ಹಲವು ಅಪಘಾತಗಳು ಸಂಬವಿಸುತ್ತಿದ್ದವು. ಇದನ್ನ ಗಮನಿಸಿದ ಸಂಚಾರಿ ಪೊಲೀಸರ ಕ್ರಮ ಶ್ಲಾಘನೀಯ.

ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ದೇವರಾಜ್, ಪಿಎಸ್ ಐ ಸ್ವಪ್ನಾ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸೂರ್ಯಾನಾಯ್ಕ್,

ಪ್ರಶಾಂತ್, ನಾಸೀರ್ ಅಹಮದ್, ಮಂಜುನಾಥ್, ಎಎಸ್ಐ ಅಂತೋಣಿ ಆನಂದ್ ಅವರು ತಡೆಗೋಡೆ ನಿರ್ಮಿಸಿ ಒಂದೊಳ್ಳೆ ಕಾರ್ಯ ಮಾಡಿದ್ದು ಪ್ರಶಂಸನೀಯ.

ನಾವು ಕೇವಲ ಸಂಚಾರಿ ರಕ್ಷಣೆಯ ಕೆಲಸ ಮಾತ್ರ ಮಾಡುವುದಿಲ್ಲ ಅದಕ್ಕೆ ಅಗತ್ಯವಾದ ವಾಸ್ತವತೆಯ ಕೆಲಸವನ್ನು ಸಹ ಮೈಬಗ್ಗಿಸಿ ಮಾಡುತ್ತೇವೆ ಎಂದು ತೋರಿಸಿಕೊಟ್ಟ ಈ ಪೊಲೀಸರ ಕ್ರಮ ಮೆಚ್ಚುಗೆಗೆ ಪಾತ್ರವಾಯಿತು.