ಮೂವರು ರಸಾಯನಶಾಸ್ತ್ರ ವಿಜ್ಞಾನಿಗಳಾದ ಜಪಾನ್ ನ ಸುಸುಮು ಕಿಟಾಗವಾ, ಬ್ರಿಟನ್ ನ್ನ ರಿಚರ್ಡ್ ರಾಬ್ಸನ್ ಮತ್ತು ಜೋರ್ಡಾನ್ ನ ಓಮರ್ ಎಂ ಯಾಘೀ, ಇವರುಗಳು 2025ರ ರಸಾಯನಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಈ ಮೂವರು ವಿಜ್ಞಾನಿಗಳು ನಡೆಸುತ್ತಿರುವ ಲೋಹ -ಸಾವಯವ ಚೌಕಟ್ಟು ( Metal–Organic Frameworks) (MOF) ಎಂಬ ಸಂಶೋಧನೆಯ ಅಭಿವೃದ್ಧಿಯನ್ನು ಪರಿಗಣಿಸಿ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿಯ ಪ್ರದಾನ ಕಾರ್ಯದರ್ಶಿ ಹನ್ಸ್ ಎಲೆಗ್ರೇನ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಸುಮು ಕಿಟಾಗವಾರವರು ಜಪಾನ್ ನ ಕ್ಯೂಟೋ ವಿಶ್ವವಿದ್ಯಾನಿಲಯದಲ್ಲಿ, ರಿಚರ್ಡ್ ರಾಬ್ಸನ್ ರವರು ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವವಿದ್ಯಾನಿಲಯದಲ್ಲಿ,

ರಸಾಯನ ಶಾಸ್ತ್ರ ನೋಬೆಲ್ ಪುರಸ್ಕಾರ ಪಡೆದ ಮೂವರು ರಸಾಯನ ಶಾಸ್ತ್ರ ವಿಜ್ಞಾನಿಗಳ ಸ್ಥೂಲ ಚಿತ್ರಣವನ್ನು ಎಸ್. ರಂಗನಾಥಯ್ಯ, ಪ್ರಾಚಾರ್ಯರು, ವಿವೇಕಾನಂದ ಲಯನ್ಸ್ ಪದವಿಪೂರ್ವ ಕಾಲೇಜು ಹೊಳೆಹೊನ್ನೂರು ಅವರು ಇಂದು ಬಿಸ್ಬೇನ್,ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ಕಳಿಸಿದ ಮಾಹಿತಿ
- ಸಂ
ಮತ್ತು ಓಮರ್ ಎಂ ಯಾಘೀ, ಯವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂರು ವಿಜ್ಞಾನಿಗಳು ಒಟ್ಟು 1.2 ದಶಲಕ್ಷ ಡಾಲರ್( ₹10.65 ಕೋಟಿ)
ನಗದು ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ.

ರಸಾಯನ ಶಾಸ್ತ್ರ ನೋಬೆಲ್ ಪುರಸ್ಕಾರ ಪಡೆದ ಮೂವರು ರಸಾಯನ ಶಾಸ್ತ್ರ ವಿಜ್ಞಾನಿಗಳಿಗೆ ಅಭಿನಂದನೆಗಳು.
ಎಸ್ ರಂಗನಾಥಯ್ಯ
ಪ್ರಾಚಾರ್ಯರು
ವಿವೇಕಾನಂದ ಲಯನ್ಸ್ ಪದವಿಪೂರ್ವ ಕಾಲೇಜು ಹೊಳೆಹೊನ್ನೂರು.
(ಬಿಸ್ಬೇನ್,ಆಸ್ಟ್ರೇಲಿಯದಿಂದ ಮಾಹಿತಿ )