ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಸೆ.27 ಮತ್ತು 28 ರಂದು ಪ್ರತಿ ವರ್ಷದಂತೆ ದಸರಾ ಕಾವ್ಯ ಕಥಾ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರಾದ ಡಿ.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.

ಸೆ.27 ರ ಶನಿವಾರ ಸಂಜೆ 4:30 ಕ್ಕೆ ಗುಡ್ ಲಕ್ ಸರ್ಕಲ್ ಹತ್ತಿರವಿರುವ ಜೀವನ ಸಂಜೆ ವೃದ್ಧಾಶ್ರಮದಲ್ಲಿ ದಸರಾ ಕಥಾ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಲಿದ್ದಾರೆ. ಕಥೆಗಾರ್ತಿ ವಾಣಿ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದು, ಜೀವನ ಸಂಜೆ ವೃದ್ದಾಶ್ರಮದ ಅಧ್ಯಕ್ಷರಾದ ಹಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಥೆಗಾರರಾದ ಡಾ.ಕೆ.ಜಿ. ವೆಂಕಟೇಶ್, ಸುಶೀಲಾ ಎಂ., ಹ.ಮಾ. ಸತೀಶ್, ನರೇಂದ್ರ ಘೋರ್ಪಡೆ, ರಾಮಕೃಷ್ಣ ಗೋಕಲೆ, ನಳಿನಿ ಬಾಲಸುಬ್ರಹ್ಮಣ್ಯ, ಕವಿತಾ ಉಂಬಳೇಬೈಲು, ಈಶ್ವರಪ್ಪ ಮಂಕಳಲೆ, ಲಕ್ಷ್ಮೀದೇವಿ ಕಡೂರು, ಸಿ. ಎಲ್. ಮಲ್ಲೇಶ್, ಗೌರಿ ಚಂದ್ರಕೇಸರಿ, ಅಚ್ಚುತರಾವ್, ಲಕ್ಷ್ಮೀನಾರಾಯಣ ಗೌಡ ಕಡೂರು, ಸುಮ ಮಂಜುನಾಥ ಕಥೆಗಳನ್ನು ವಾಚಿಸಲಿದ್ದಾರೆ.

ಸೆ.28 ರಂದು ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಪ್ರತಿ ವರ್ಷದಂತೆ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10:30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿಯನ್ನು ನಾಡಿನ ಖ್ಯಾತ ಶಾಯರಿ ಕವಿ ಅಸಾದುಲ್ಲಾ ಬೇಗ್ ಉದ್ಘಾಟಿಸಲಿದ್ದಾರೆ. ಸಾಹಿತಿಗಳಾದ ಬಿ. ಟಿ. ಅಂಬಿಕಾ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ, ಕಸಾಸಾಂ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಆಶಯ ಮಾತುಗಳನ್ನಾಡಲಿದ್ದು, ಇದೇ ಸಂದರ್ಭದಲ್ಲಿ ಸಾಗರದ ದೇವನೂರು ಅಚ್ಯುತರಾವ್ ಅವರು ರಚಿಸಿದ ಚಿಂತನ – ಮಂಥನ ಏನಂತೀರಾ ಪುಸ್ತಕ ಲೋಕಾರ್ಪಣೆ ನಡೆಯಲಿದೆ.

ಕವಿಗಳಾದ ತುಮಕೂರಿನ ಗೌರಿ ಕುಲಕರ್ಣಿ, ಸೊರಬದ ಡಾ. ರಾಜೇಂದ್ರ, ಬಿದರಗದ್ದೆ ಸಂತೋಷ, ಕಡೂರು ಲಕ್ಷ್ಮೀದೇವಿ, ಉಂಬಳೇಬೈಲು ಕವಿತಾ, ಗೌಸ್ ಪೀರ್, ಉಜ್ಜನೇಶ್ವರಿ ಆನವಟ್ಟಿ, ಕಾರ್ಗಲ್ ನಿಶ್ಚಿತಾ ಶೆಟ್ಟಿ, ಉಡುಪಿ ಪವಿತ್ರಾ ಎನ್. ದೇವಾಡಿಗ, ಹ. ಮ. ಸತೀಶ್, ಎಂ. ಸುಶೀಲಾ ಹೊಸಮನೆ, ಚೈತ್ರಾ ಕಾರ್ಗಲ್, ಅಂಬಿಕಾ ಸಂತೋಷ ಹೊಸನಗರ, ರಂಗನಾಥ ಕೆ. ಎಸ್. ಚನ್ನಗಿರಿ, ನಾಗೋಜಿರಾವ್ ಡಿ. ಭದ್ರಾವತಿ, ಶೀಲಾವತಿ ಸಂತೋಷ, ಈಶ್ವರಪ್ಪ ಮಂಕಳಲೆ, ಶೋಭಾ ಸತೀಶ್ ಚಿಲಕಾದ್ರಿಹಳ್ಳಿ, ಆಶಾರಾಣಿ ಶಿಕಾರಿಪುರ, ನರೇಂದ್ರ ಘೋರ್ಪಡೆ ಭದ್ರಾವತಿ, ಡಾ. ಹರೀಶ್ ಸಿ. ಹಂಸ, ಕರಗುಂದ ರಾಮಣ್ಣ, ವೈಷ್ಣವಿ ಎಂ. ಡಿ., ಸೊರಬ, ಡಾ. ರವೀಶ್ ಎನ್. ಎಸ್., ಸುಜಾತಾ ಬಸವರಾಜ್, ಗಂಗಾಧರ ಪಿ. ಬನ್ನೀಹಟ್ಟಿ, ನಳಿನಿ ಬಾಲಸುಬ್ರಹ್ಮಣ್ಯ, ವಾಣಿ ಭಂಡಾರಿ, ಮಂಜಾನಾಯ್ಕ ಭದ್ರಾವತಿ, ಶುಭಾ ಕುಸ್ಕೂರು, ಕೆ. ರಾಮಾಚಾರ್, ಮನೋರಮ ಕೆ. ಅವರು ಕವನಗಳನ್ನು ವಾಚಿಸಲಿದ್ದಾರೆ.

ಸೆ.28 ರಂದು ಇಳಿಹೊತ್ತು 03:30 ಕ್ಕೆ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜನಪದ ಹಾಡುಗಳ ವೃಂದಗಾಯನ ಸ್ಪರ್ಧೆ ಮತ್ತು ಒಗಟು ಹೇಳುವ ಕಾರ್ಯಕ್ರಮ ಹಾಗೂ ದಸರಾ ಕಾವ್ಯಸಂಜೆ ನಡೆಯಲಿದೆ. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳ ಸಮ್ಮುಖದಲ್ಲಿ ಖ್ಯಾತ ಜನಪದ ಗಾಯಕರಾದ ಕೆ. ಯುವರಾಜ್ ಉದ್ಘಾಟಿಸಲಿದ್ದಾರೆ. ಕಸಾಪ, ಕಜಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶರಾವತಿ ಮಹಿಳಾ ಮಂಡಳಿ ಅಧ್ಯಕ್ಷರಾದ ಶಶಿಕಲಾ ಕೆ. ಎಸ್., ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಎನ್. ದಿನೇಶ್, ಉದ್ಯಮಿಗಳು, ಭಾರತೀಯ ಕುಟುಂಬ ಯೋಜನಾ ಸಂಘದ ಅಂತರಾಷ್ಟ್ರೀಯ ಮಾಜಿ ಅಧ್ಯಕ್ಷರಾದ ಉಮೇಶ್ ಆರಾಧ್ಯ ಭಾಗವಹಿಸಲಿದ್ದಾರೆ. ಹದಿನೇಳು ವಿವಿಧ ತಂಡಗಳು ಜನಪದ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಒಗಟು ಹೇಳಲು ಭವ್ಯ ಸುಧಾಕರ ಜಗಮನೆ, ಶೈಲಜಾ, ರಚನಾ ಚೇತನ, ನಾಗೇಂದ್ರಪಗಪ್ಪ ಪಿ., ದಾವಣಗೆರೆ ಇವರುಗಳು ಭಾಗವಹಿಸಲಿದ್ದಾರೆ. ದಸರಾ ಕಾವ್ಯ ಸಂಜೆಯ ಅಧ್ಯಕ್ಷತೆಯನ್ನು ಕವಿ ಪ್ರೊ ಸತ್ಯನಾರಾಯಣ ವಹಿಸಲಿದ್ದಾರೆ. ಕವಿಗಳಾದ ಬಿ. ಜಿ. ಗೀತಾ, ಶೈಲಜಾ, ಹೇಮಾ ಕೆ. ಎಂ., ಗೌರಿ ಚಂದ್ರಕೇಸರಿ, ಭಾರತಿಬಾಯಿ, ಸರಸ್ವತಿ ಟಿ. ಎಸ್., ತಿಮ್ಮೇಶಪ್ಪ, ಕೃಪಾ ಸಂತೋಷ, ಸ್ಮಿತಾ ನಂದೀಶ್, ಗೌರಮ್ಮ ಆರ್., ವಾಗೀಶ್ ಆರಾಧ್ಯಮಠ, ದೀಪ ಕುಬ್ಸದ್, ಪಿ. ಕೆ. ಸತೀಶ್, ರಚಿತಾ ಚೇತನ, ಸಂತೋಷ ಹೆಚ್. ಜಿ., ಉಮಾ ಕುಲಕರ್ಣಿ, ರಶ್ಮಿಕಾ ಸುರೇಶ್ ಜೋಗಿಬೆಟ್ಟ, ಕೆ. ರಾಮಚಂದ್ರ, ರಾಘವೇಂದ್ರ ಈ. ಹೊರಬೈಲು ಅವರುಗಳು ಭಾಗವಹಿಸಲಿದ್ದಾರೆ.
ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಸುದ್ದಿಗೋಷ್ಢಿಯಲ್ಲಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಯು.ಮಧುಸೂದನ್ ಐತಾಳ್, ಟಿ.ಕೃಷ್ಷಪ್ಪ, ಎಂ. ನವೀನ್ ಕುಮಾರ್, ಡಿ. ಗಣೇಶ್, ಕೃಷ್ಣಮೂರ್ತಿ ಹಿಳ್ಳೋಡಿ, ಪ್ರೊ. ಸತ್ಯನಾರಾಯಣ, ಕೆ. ರಾಮಚಂದ್ರ, ಪ್ರವೀಣ್, ಸುಶೀಲಾ ಷಣ್ಮುಗಂ, ಕೆ. ಎಸ್. ಮಂಜಪ್ಪ, ಎಸ್. ಷಣ್ಮುಖಪ್ಪ ಉಪಸ್ಥಿತರಿದ್ದರು.