ಶಿವಮೊಗ್ಗ,ಸೆ,25:ಶಿವಮೊಗ್ಗ ಶಾಖಾ ಮಠದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಶೀ ಕಾಳಿಕಾಂಬ ದೇವಿಯ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ

ಪ್ರಯುಕ್ತ ಹೋಮ ಹವನಾದಿಗಳನ್ನು,ವಿಶೇಷವಾದ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು.

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯದಲ್ಲಿ ಮೂರನೇ ದಿನದ ನವರಾತ್ರಿ ಪ್ರಯುಕ್ತ ಶ್ರೀ ಕಾಳಿಕಾಂಬ ದೇವಿಗೆ,ವಿವಿಧ ಹೂವುಗಳಿಂದ ಚಂದ್ರಘಂಟಾದೇವಿ ಅಲಂಕಾರವನ್ನು,ವಿಶೇಷ ಪೂಜಾ ಕೈಂಕರ್ಯಗಳನ್ನು ಪೂಜ್ಯರಿಂದ ನೆರವೇರಿಸಲಾಯಿತು.

ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ. ಎಸ್. ಈಶ್ವರಪ್ಪರವರು ದಂಪತಿ ಸಮೇತರಾಗಿ ಆಗಮಿಸಿ, ಪೂಜಾ ಕಾರ್ಯಕ್ರಮದಲ್ಲಿ

ಪಾಲ್ಗೊಂಡರು, ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ಎಸ್. ಎಚ್.,ಶಿಕ್ಷಕರು, ಉಪನ್ಯಾಸಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.