ಶಿವಮೊಗ್ಗ : ನಗರದೇವತೆ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಸೆ.22ರಿಂದ ಅಕ್ಟೋಬರ್ 2ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಸೆ.22ರ ನಿನ್ನೆ ಶೈಲಪುತ್ರಿ ಅಲಂಕಾರವನ್ನು ದೇವಿಗೆ ಮಾಡಲಾಗಿತ್ತು.

ಸೆ.23 ರ ಇಂದು ಬ್ರಹ್ಮಚಾರಣಿ ಅಲಂಕಾರ, ಸೆ.24ರಂದು ಚಂದ್ರಘಂಟಾ ಅಲಂಕಾರ, ಸೆ.25ರಂದು ಕೂಷ್ಮಾಂಡ ಅಲಂಕಾರ, ಸೆ.26ರಂದು ಸ್ಕಂದಮಾತಾ ಅಲಂಕಾರ, ಸೆ.27ರಂದು ಕಾತ್ಯಾಯಿನಿ ಅಲಂಕಾರ, ಸೆ.28ರಂದು ಅನ್ನಪೂರ್ಣೇಶ್ವರಿ ಅಲಂಕಾರ, ಸೆ.29ರಂದು ಸರಸ್ವತಿ

ಅಲಂಕಾರ, ಸೆ.30ರಂದು ದುರ್ಗಾದೇವಿ ಅಲಂಕಾರ, ಅ.1ರಂದು ಮಹಿಷಾಸುರ ಮರ್ದಿನಿ ಅಲಂಕಾರ, ಅ.2ರಂದು ಮಹಿಷಾಸುರಮರ್ದಿನಿ ಅಲಂಕಾರ ಮಾಡಲಾಗುತ್ತದೆ. ಪ್ರತಿದಿನ ಅಮ್ಮನವರಿಗೆ ಅಭಿಷೇಕ, ಅರ್ಚನೆ, ಪಾರಾಯಣ ಹೋಮ ಹಾಗೂ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಇರುತ್ತದೆ.

ಸೆ.30ರಂದು ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ಚಂಡಿಕಾ ಹೋಮ ಏರ್ಪಡಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಇಚ್ಚಿಸುವವರು 101 ರೂ. ಶುಲ್ಕ ಪಾವತಿಸಿ ಹೆಸರು ನೊಂದಾಯಿಸಿಕೊಳ್ಳ ಬಹುದು. ಒಂದುದಿನದ ಸರ್ವಸೇವೆಗೆ 1201, ಹೂವಿನ ಅಲಂಕಾರ ಸೇವೆಗೆ 1001ರೂ.ಪ್ರಸಾದ

ಸೇವೆಗೆ 3000ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಭಕ್ತಾಧಿಗಳು ಈ ಎಲ್ಲಾ ಸೇವಾಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದ್ದಾರೆ.