ಶಿವಮೊಗ್ಗ, ಸೆ.23:
ಇಂದು ಪೌರಕಾರ್ಮಿಕರ ದಿನಾಚರಣೆ ಸಂಭ್ರಮ, ದಸರಾ ಸಡಗರದೊಂದಿಗೆ ಈ ದಿನ ಪೌರ ಕಾರ್ಮಿಕರ ದಿನಾಚರಣೆ ಬೆರೆತಿರೋದು ವಿಶೇಷ.

ಶಿವಮೊಗ್ಗ ಮಹಾನಗರ ಪಾಲಿಕೆ ಅಯುಕ್ತರಾದ ಮಾಯಣ್ಣಗೌಡರು ಪೌರಕಾರ್ಮಿಕರೊಂದಿಗೆ ಸರಳತೆ ಮೂಲಕ ಬೆರೆತು ಭರ್ಜರಿ ಸ್ಟೆಪ್ ಹಾಕಿ ಸರಳತೆ ಮೆರೆದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದ್, ಸಹಾಯಕ ಕಂದಾಯ ಅಧಿಕಾರಿ ಎಸ್.ಜಿ ಮಂಜಣ್ಣ .ಸೇರಿದಂತೆ ಎಲ್ಲರೂ ಸಂಭ್ರಮಿಸಿದ್ದು ವಿಶೇಷ.

ನಾಡಹಬ್ಬ ದಸರಾ ಅಂಗವಾಗಿ ಹಾಗೂ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪಾಲಿಕೆಯ ಅಯುಕ್ತರಾದ ಮಾಯಣ್ಣಗೌಡರು ಪೌರ ಕಾರ್ಮಿಕರ ಜೊತೆಗೆ ತಮಟೆ ಸೌಂಡ್ ಗೆ ಭರ್ಜರಿ ಸ್ಟೇಪ್ ಹಾಕಿ ಎಲ್ಲರ ಕಣ್ಮನ ಸೆಳೆದರು.

ಮಾಯಣ್ಣಗೌಡರು ನೌಕರರ ಹಾಗೂ ಅಧಿಕಾರಿಗಳಿಂದ ಜನಪರ ಕೆಲಸದ ವಿಚಾರದಲ್ಲಿ ಕಡ್ಡಿ ತುಂಡಾದಂತೆ ಕೆಲಸ ಮಾಡಿಸಿಕೊಡ್ತಾರೆ.

ಹಾಗೆಯೆ ಅವರ ಕುಶಿಯೊಳಗೆ ಸಿಂಫಲ್ ಅಗಿ ಜೊತೆಗೂಡಿ ಸಂತೋಷದಿಂದ ಸ್ಟೇಪ್ ಹಾಕಿದ್ದು ವಿಶೇಷ. ಕಷ್ಟಕ್ಕೂ ಸಹ ಸ್ಪಂದಿಸುವ ಮನೋಭಾವ ಅವರದು ಎಂಬುದು ಪಾಲಿಕೆ ಪಡಸಾಲೆಯ ಮಾತು.