ಶಿವಮೊಗ್ಗ, ಸೆ.20:
ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ವುಷು ಆಯ್ಕೆಯಲ್ಲಿ ಭಾಗವಹಿಸಿದ್ದ

ಶಿವಮೊಗ್ಗ ರವೀಂದ್ರ ನಗರದ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಕ್ರೀಡಾಪಟುಗಳು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ರಾಜ್ಯಮಟ್ಟದ ದಸರಾ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟುಗಳಾದ ಚಾರ್ವಿ ಟಿ – 52 ಕೆಜಿ, ದಾಕ್ಷಾಯಿಣಿ -42 ಕೆಜಿ, ಭುವನ -39 ಕೆಜಿ, ತೇಜಸ್ -45 ಕೆಜಿ, ಚಂದನ -46 ಕೆಜಿ ,ಅಮೃತ -48 ಕೆಜಿ ವಿಭಾಗಗಳಲ್ಲಿ

ಆಯ್ಕೆಯಾಗಿದ್ದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದಾರೆ.

ಆಯ್ಕೆಯಾದ ಕ್ರೀಡಾಪಟುಗಳಿಗೆ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಅನೂಪ್ ಎನ್ ಪಟೇಲ್,

ಉಪಾಧ್ಯಕ್ಷರಾದ ರಾಗಿನಿ ಸಿಂಗ್, ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ರೂಪಶ್ರೀ, ಪೂರ್ಣಿಮಾ, ಆಡಳಿತ ಮಂಡಳಿ, ಸ್ವಾಮಿವಿವೇಕಾನಂದ ಶಿಕ್ಷಣ ಸಮೋಹ ಹಾಗೂ ಶಿಕ್ಷಕ ವೃಂದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.


ಶಿವಮೊಗ್ಗ ಜಿಲ್ಲಾ ವುಷು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲೆಯ ವುಷು ತರಬೇತುದಾರರಾದಂತಹ ಮುಕೆಬ್ ಅಹಮದ್ ದರ್ವೇಶ್ ಅವರು ವಿಜೇತರಿಗೆ ಶುಭಕೋರಿದ್ದಾರೆ.