ಶಿವಮೊಗ್ಗ, ಸೆ.10:
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೆಲ್ತ್ ಕೇರ್ನಲ್ಲಿ ಸೆ.11ರ ಗುರುವಾರ ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಶನೇಶ್ಚರ ದೇವಾಲಯದ ಬಳಿಯ ಐಡಿಎಫ್ಸಿ ಬ್ಯಾಂಕ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಏರ್ಪಡಿಲಾಗಿದೆ.
ನುರಿತ ತಜ್ಞ ವೈದ್ಯ ಹಾಗೂ ಮ್ಯಾಕ್ಸ್ ಆಸ್ಪತ್ರೆಯ counsulant urologist, uro-Genital Surgeon and andrologist ಡಾ.ಎಸ್.ಚಂದ್ರಶೇಖರ್ ತಪಾಸಣೆ ನಡೆಸಲಿದ್ದು, ತಪಾಸಣೆಯಲ್ಲಿ ಬಿ.ಪಿ. ಶುಗರ್ ಮತ್ತು ಇಸಿಜಿ ಜೊತೆಗೆ ರಿಪೋರ್ಟಿಂಗ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ 8453475775, 9513878265 ಗೆ ಸಂಪರ್ಕಿಸಿ. ಕರೆ ಮಾಡಿ ನೊಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ.

ವಿಶೇಷ ಸೂಚನೆ: ಕಿಡ್ನಿ ಮತ್ತು ಮೂತ್ರಕೋಶ ತೊದರೆಯಿಂದ ಬಳಲುತ್ತಿರುವವರು ಮಾತ್ರ ಬರತಕ್ಕದ್ದು. (ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕಲ್ಲು, ಸಂಪೂರ್ಣ ಮೂತ್ರ ನಿಲ್ಲುವುದು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಬಿಪಿ, ಶುಗರ್, ವೃದ್ದಾಪ್ಯದ ಮೂತ್ರದ ತೊಂದರೆಗಳು, ಜೀರ್ಣಾಂಗದ ತೊಂದರೆ, ನಿಮಿರುದೌರ್ಬಲ್ಯ ಗಂಡಸರಿಗೆ ಮಾತ್ರ, ಕೈ ಕಾಲು ಮತ್ತು ಮುಖ ಊದಿಕೊಳ್ಳುವುದು)