

ಶಿವಮೊಗ್ಗ,ಆ.23:
ನಿತ್ಯ ಸಾವಿರಾರು ರೋಗಿಗಳು ಹಳ್ಳಿಗಳು ಸೇರಿದಂತೆ ಬೇರೆ ಜಿಲ್ಲೆಗಳಿಂದ ತಮ್ಮ ಚಿಕಿತ್ಸೆಗೆಂದು ಮೆಗ್ಗಾನ್ ಅಸ್ಪತ್ರೆಗೆ ಭೇಟಿ ನೀಡುತ್ತಿದ್ದ ರೋಗಿಗಳು, ರೋಗಿಗಳ ಸಂಬಂಧಿಕರು ನಿತ್ಯ ಔಷದಿಗಾಗಿ ಆನ್ಲೈನ್ ವ್ಯವಸ್ಥೆಯ ಕಾರಣದಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ತುಂಗಾ ತರಂಗ ವರದಿಯ ನಂತರ ಮೆಗಾನ್ ಅಸ್ಪತ್ರೆಯಲ್ಲಿ ಅಧಿಕಾರಿಗಳು ಔಷಧಿ ಕೇಂದ್ರಗಳನ್ನು ತೆರೆದು
ಸಿಬ್ಬಂಧಿಗಳನ್ನು ಹೆಚ್ಚಿಸಿರುವುದು
ಇದನ್ನು ಗಮನಿಸಿದ ತುಂಗಾತರಂಗ ದಿನ ಪತ್ರಿಕೆ ನಿರಂತರವಾಗಿ ವರದಿ ಪ್ರಚುರಪಡಿಸಿ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಖಂಡಿಸಿದ ಹಿನ್ನೆಲೆಯಲ್ಲಿ ಈಗ ಇಡೀ ಆಸ್ಪತ್ರೆಯ ಔಷಧಿ ವಿಧಾನ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ ಒಂದಿಷ್ಟು ಬೇಗನೆ ಔಷಧಿ ದೊರಕುವಂತೆ ಮಾಡಲಾಗಿದೆ.

ಔಷಧಿ ವಿತರಣಾ ಸಿಬ್ಬಂಧಿಗಳು ಅನ್ ಲೈನ್ ಔಷಧಿ ವಿತರಣೆ ವ್ಯವಸ್ಥೆಯಿಂದಾಗಿ ನಿತ್ಯ ರೋಗಿಗಳ ಪಾಲಿಗೆ ದುಶ್ಮನ್ ಗಳಾಗಿದ್ದರು.
ಇಲ್ಲಿ ಔಷಧಿ ವಿತರಣಾ ಕೇಂದ್ರಗಳು ಸಾಕಷ್ಟು ಕಡಿಮೆ ಇದ್ದುದರಿಂದ ಪ್ರತಿನಿತ್ಯ ರೋಗಿಗಳು ಔಷಧಿ ವಿತರಣೆ ಮಾಡುವ ಸಿಬ್ಬಂಧಿಗಳು
ವಾದ ವಿವಾದಗಳು, ಜೊತೆಗೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು.

ಕೇವಲ ಮೂರು ಔಷಧಿ ಕೇಂದ್ರಗಳ ಮುಂದೆ ಪ್ರತಿನಿತ್ಯ ಸಾವಿರಾರು ರೋಗಿಗಳು ಸರತಿ ಸಾಲಿನಲ್ಲಿ ನಿಂತರೂ ಅನ್ ಲೈನ್ ಔಷಧಿ ವಿತರಣೆ ವ್ಯವಸ್ಥೆಯಿಂದ ಸರತಿ ಸಾಲಿನಲ್ಲಿ ಸಾಕಷ್ಟು ಸಮಯದ ವರೆಗೆ ನಿಂತರೂ ಸಹ ಸರಿಯಾದ ಸಮಯಕ್ಕೆ ಔಷಧಿಗಳು ಸಿಗದ ಕಾರಣ ಖಾಸಗಿ ಮೆಡಿಕಲ್ ಗೆ ತೆರಳಿ ಔಷಧಿಗಳನ್ನು ಖರೀದಿಸುತ್ತಿದ್ದರು.
ಇಲ್ಲಿನ ವ್ಯವಸ್ಥೆಯನ್ನು ಗಮನಿಸಿದ ತುಂಗಾ ತರಂಗ ಪತ್ರಿಕೆ ಹಾಗೂ ವೆಬ್ ನ ಮೂಲಕ ರೋಗಿಗಳು ಔಷಧಿಗಾಗಿ ಪರದಾಡುತ್ತಿರುವುದನ್ನು, ಔಷಧಿ ಕೇಂದ್ರದ ಸಿಬ್ಬಂಧಿಗಳು ಅನುಭವಿಸುತ್ತಿದ್ದ ಸಾಕಷ್ಟು ಕಿರಿಕಿರಿ ಗಮನಿಸಿ ಕೂಡಲೇ ಔಷಧಿ ಕೇಂದ್ರಗಳನ್ನು ಇನಷ್ಟು ಹೆಚ್ಚಿಸಿ ಎಂದು
ವರದಿಗಳನ್ನು ಪ್ರಕಟ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ

ಮೆಗ್ಗಾನ್ ನ ಅಧಿಕಾರಿಗಳು
ಔಷಧಿ ಕೇಂದ್ರಗಳು ಸೇರಿದಂತೆ
ಸಿಬ್ಬಂದಿಗಳನ್ನು ಸಹ ಹೆಚ್ಚಿಸಿ
ರೋಗಿಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳನ್ನು ದೊರೆಕಿಸುವಂತೆ ಮಾಡಿದ್ದಾರೆ.

ಔಷಧಿ ಕೇಂದ್ರಗಳ ಹೆಚ್ಚಳದಿಂದ ಅಸ್ಪತ್ರೆಯಲ್ಲಿ ಒಂದಷ್ಟು ಬದಲಾವಣೆಯಾಗಿದೆ ಹಾಗೂ
ಕಿರಿಕಿರಿ ತಪ್ಪಿದೆ ಎಂದು ಅಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳು ತುಂಗಾ ತರಂಗ ಕ್ಕೆ ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಮೆಗಾನ್ ಆಸ್ಪತ್ರೆಯ ಅಧೀಕ್ಷಕ ಡಾ.ಟಿ.ಡಿ ತಿಮ್ಮಪ್ಪ ಹಾಗೂ ಅಧಿಕಾರಿಗಳನ್ನು ತುಂಗಾತರಂಗ ದಿನಪತ್ರಿಕೆ ಅತ್ಯಂತ ಮುಕ್ತವಾಗಿ ಅಭಿನಂದಿಸುತ್ತದೆ ಸಮಸ್ಯೆ ಹೆಚ್ಚುವಂತೆ ಮಾಡಿದಾಗ ಅತ್ಯಂತ ಖಾರವಾಗಿ ಹೇಳುವ ಪತ್ರಿಕೆ ಒಳ್ಳೆಯದನ್ನು ಮಾಡಿದಾಗ ಸಹ ಅತ್ಯಂತ ಆತ್ಮೀಯವಾಗಿ ಶ್ಲಾಘನೀಯವಾಗಿ ಗುಣಗಾನ ಮಾಡುತ್ತದೆ.