ಶಿವಮೊಗ್ಗ ತಾಲೂಕಿನ ಹೊಳಲೂರಿನಲ್ಲಿ ತೋಟವೊಂದರಲ್ಲಿ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಇತ್ತೀಚೆಗೆ ಹಾಡೋನಹಳ್ಳಿ-ಹೊಳಲೂರು ಸಮೀಪದಲ್ಲಿ ೫ರಿಂದ ೬ ಕರಡಿಗಳ ಓಡಾಟಕ್ಕೆ ಜನರು ಭಯಭೀತರಾಗಿದ್ದರು. ಕೂಡಲೇ ಅರಣ್ಯ ಇಲಾಖೆಯಿಂದ ಈ ಕರಡಿಗಳನ್ನು ಹಿಡಿಯಲು ಮುಂದಾಗಿದ್ದು, ಕರಡಿಗಳು ಓಡಾಡುವ ಹಲವು ಭಾಗಳಲ್ಲಿ ಬೋನ್ಗಳನ್ನು ಇರಿಸುವ ಕೆಲಸ ಮಾಡಿದ್ದರು.
ಇದೇ ತಿಂಗಳ ಜು.11ರಂದು ಒಂದು ಕರಡಿ ಬೋನಿಗೆ ಬಿದ್ದಿತ್ತು. ಈಗ ಮತ್ತೊಂದು ಕರಡಿಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ವಲಯ ಅರಣ್ಯ ಅಧಿಕಾರಿ ವಿಜಯಕುಮಾರ್ ಜೆ ರವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕ ಕೊಟ್ರೇಶ್ ದಾನಮ್ಮನವರ್ ತಂಡವು ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.