ಶಿವಮೊಗ್ಗ : ಬಿಜೆಪಿ ಯುವ ಮೋರ್ಚಾ ವತಿಯಿಂದ ೨೬ ರಂದು ಬಿಜೆಪಿ ಶಿವಮೊಗ್ಗ ಪಕ್ಷದ ಕಚೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮವನ್ನು ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಹುಲ್ ಬಿದರೆ ಅವರ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವದ ಆಚರಣೆ

ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಹರಿಕೃಷ್ಣರವರು ಮುಖ್ಯ ಭಾಷಣಕಾರ ರಾಗಿ, ೧೯೯೯ ರ ಭಾರತದ ಯುದ್ಧ ಗೆಲುವನ್ನು ನೆನೆದು, ನಮ್ಮ ದೇಶದ ಹೆಮ್ಮೆಯ ಸೈನಿಕರ ಧೈರ್ಯ, ಶೌರ್ಯ,

ಮತ್ತು ತ್ಯಾಗವನ್ನು ಗೌರವಿಸಿ, ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿದಾರು, ನಂತರ ನಿವೃತ್ತ ಯೋಧರು ಕಾರ್ಗಿಲ್ ವಿಜಯೋತ್ಸವದಲ್ಲಿ ಭಾಗಿಯಾದ ಶಿವಮೊಗ್ಗ ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ನವರು, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಮಾಜಿ

ಸೋಡಾ ಅಧ್ಯಕ್ಷರಾದ ಎಸ್ ಜ್ಞಾನೇಶ್ವರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಕೆ. ನವುಲೆ, ಹೆಚ್.ಕೆ. ದೀನ್ ದಯಾಳ್, ಯುವ ಮೋರ್ಚಾದ ಅಭಿಷೇಕ್, ಯುವರಾಜ್, ಪ್ರಮುಖರು ಉಪಸ್ಥಿತರಿದ್ದರು.