ದಾವಣಗೆರೆ: 20 ವರ್ಷಗಳಲ್ಲಿ ನಾಲೆಗಳಲ್ಲಿ ತಲುಪದಿದ್ದ ನೀರು ಈಗ ಹರಿಯುತ್ತಿದೆ. ಇದು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಶ್ರಮ. ಮಲೇಬೆನ್ನೂರಿನಲ್ಲಿ ನಡೆದ ಸಭೆಯಲ್ಲಿ ಕೊನೆ ಭಾಗಕ್ಕೆ ನೀರು ಕೊಡುತ್ತೇನೆ ಎಂದು ಅವರು ಭರವಸೆ ನೀಡಿದಾಗ ಇದು ಅನನುಭವಿ ಹೇಳಿಕೆ ಎಂದುಕೊಂಡಿದ್ದೆವು. ನಂಬಲು ಸಾಧ್ಯವಾಗದ ರೀತಿಯಲ್ಲಿ ನೀರು ಬರುತ್ತಿರುವುದು ಸಂತಸ ತಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.

ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕೊನೆಯ ಭಾಗಗಳಾದ ತ್ಯಾವಣಿಗೆ ಹಾಗೂ ಕುಕ್ಕವಾಡ ಗ್ರಾಮದ ರೈತರು ಗುರುವಾರ ಹಮ್ಮಿಕೊಂಡಿದ್ದ ’ಕಾಡಾ’ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅಚ್ಚುಕಟ್ಟು ಭಾಗದ ರೈತರು ಪಕ್ಷಾತೀತವಾಗಿ ಪವಿತ್ರ ರಾಮಯ್ಯ ಅವರೇ ಕಾಡಾ ಅಧ್ಯಕ್ಷರಾಗಿ ಬರಲಿ ಎಂದು ಒತ್ತಾಯಿಸುತ್ತೇವೆ. ಅವರಲ್ಲಿ ಅನ್ನದಾತರಿಗೆ ಅನುಕೂಲವಾಗಬೇಕು ಎಂಬ ಮನಸ್ಸಿದೆ. ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ’ ಎಂದು ಆಶಿಸಿದರು.

’1980ರಲ್ಲಿ ಆರಂಭವಾದ ಅಚ್ಚುಕಟ್ಟು ಪ್ರಾಧಿಕಾರವು ಹಲವಾರು ಅಧ್ಯಕ್ಷರನ್ನು ಕಂಡಿದೆ. ಆದರೆ ಕೊನೆಯ ಭಾಗಕ್ಕೆ ನೀರು ತಲುಪಿಸುವಲ್ಲಿ ಯಾವ ಅಧ್ಯಕ್ಷರು ಗೆದ್ದಿರಲಿಲ್ಲ. ನೀರು ಕೊಟ್ಟ ನೀವು ಗಂಗಾ ಮಾತೆಯಂತೆ’ ಎಂದು ಅಚ್ಚುಕಟ್ಟು ಭಾಗದ ರೈತರು ಪ್ರಶಂಸಿದರು.

ಭದ್ರಾ ನೀರು ಬಳಕೆದಾರರ ಮಹಾ ಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಅಧೀಕ್ಷಕ ಎಂಜಿನಿಯರ್ ಚಂದ್ರಹಾಸ್, ಕಾರ್ಯಪಾಲಕ ಎಂಜಿನಿಯರ್ ಮಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ, ಪ್ರಮುಖರಾದ ದಿನೇಶ್, ಮಂಜುನಾಥ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!