ಸೊರಬ: ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿದ ಆರು ಆರೋಪಿಗಳನ್ನು ಗುರುವಾರ ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೊರಬದ ಕುದುರೆ ಗಣಿಯ ಗಣೇಶ, ಹಾವೇರಿಯ ಚಂದ್ರು, ಶಿರಸಿಯ ದೀಪಕ್, ಸಂದೀಪ, ಯುವರಾಜ್, ಉತ್ತರ ಪ್ರದೇಶ ಮೂಲದ ಗುಲ್ಘಾಮ್ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಮಾವಲಿ ಗ್ರಾಮದಲ್ಲಿರುವ ಜಿಯೊ ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ ೪೮ ಬ್ಯಾಟರಿಗಳನ್ನು ಮಂಗಳವಾರ ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗುರುವಾರ ಪಟ್ಟಣದ ಕಾನುಕೊಪ್ಪದ ಬಳಿ ೨ ಲಗೇಜ್ ಆಟೊದಲ್ಲಿ ಕಳವು ಮಾಡಿ ಸಾಗಿಸುತ್ತಿದ್ದ ಬ್ಯಾಟರಿಗಳ ಸಮೇತ ೨ ಲಗೇಜ್ ಆಟೊ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಪಿಐ ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್‌ಐ ಟಿ.ಬಿ.ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಎಎಸ್‌ಐ ಶಬ್ಬೀರ್ ಖಾನ್, ಸಿಬ್ಬಂದಿ ದಿನೇಶ್, ಸಂದೀಪ್, ಪ್ರಭಾಕರ್, ಮೋಹನ್, ಉಮೇಶ್, ಶಿವಾಜಿ, ಸಿದ್ದನಗೌಡ, ಮಂಜುನಾಥ್ ದೈವಜ್ಞ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!