ಶಿವಮೊಗ್ಗ : ರಕ್ತ, ಬಲಿದಾನದ ಬೆಲೆ ತಿಳಿದುಕೊಳ್ಳಬೇಕು. ಅದು ಗೊತ್ತಿಲ್ಲ ಅಂದ್ರೆ ಆ ದೇಶ ಕರಾಳ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.
ಅವರು ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ತುಂಗಾ ಕಲ್ಚರಲ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ಒಳ-ಹೊರಗಿನ ಶತ್ರುಗಳಿಂದ ಭಾರತ ಅಸ್ಮಿತೆಯ ರಕ್ಷಿಸಿದ ಸಿಂಧೂರ ವೀರರಿಗೆ ನಮನ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಅದನ್ನು ಮೆಟ್ಟಿ ನಿಲ್ಲುವ ಯಾವುದೇ ಕಾರ್ಯಕ್ಕೂ ಸಿದ್ಧರಾಗಿರಬೇಕು. ನಾವು ಬೈನರಿಯಲ್ಲಿ ಬದುಕುವುದು ಬೇಡ. ಅಸಹಾಯಕತೆಯಲ್ಲಿ ಓಡಾಡುವ ಜನ ನಾವಾಗಬಾರದು. ಭಾರತದ ಮೇಲೆ ಈ ಹಿಂದೆ ಆದ ಪ್ರತಿ ದಾಳಿಯೂ ಯುದ್ಧ ಘೋಷಣೆ ಆದಂತೆ ಆಗುತ್ತಿತ್ತು ಎಂದ ಅವರು ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಶ್ರೀಮತಿ ಇಂದಿರಾಗಾಂಧಿ ಅವರು ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ಆದಾಗ ಅತ್ಯಂತ ಸಮರ್ಥವಾಗಿ ಹಿಮ್ಮೆಟ್ಟಿಸಿದರು ಎಂದರು.
ದೇಶದ ಸಂಸತ್ತಿನಲ್ಲಿ ಈ ಮೊದಲು ರಕ್ಷಣಾ ಸಚಿವರು ದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದರೆ, ಸೇತುವೆ ನಿರ್ಮಿಸಿದರೆ, ರಕ್ಷಣಾ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದರೆ ವಿದೇಶಿಯರಿಗೆ ನಮ್ಮ ದೇಶದೊಳಗೆ ನುಸುಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದುಂಟು. ಈಗಲೂ ಕೂಡಾ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ಗಳಿಗೆ ಸಾಕ್ಷಿ ಕೊಡಿ ಅಂತ ಕೇಳುವವರಿದ್ದಾರೆ. ಆದರೆ ಆಪರೇಷನ್ ಸಿಂಧೂರದ ಮೂಲಕ ಎಲ್ಲ ಸಾಕ್ಷಿ ಕೊಡಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

11 ವರ್ಷಗಳ ಹಿಂದೆ ದೇಶದ ರಕ್ಷಣಾ ರಪ್ತು ಕೇವಲ 636 ಕೋಟಿ ರೂ.ಇತ್ತು. ಈಗ 26 ಸಾವಿರ ಕೋಟಿ ರೂಪಾಯಿಗೆ ಏರಿದೆ. ದೇಶ ಎಲ್ಲಿಂದ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದ ಅವರು ಅಪಾಯದ ಮುನ್ಸೂಚನೆ ಬಂದಾಗ ಅದು ಎಲ್ಲಿಂದ ಬಂತು ಎಂದು ತಿಳಿದು ಬಾಹ್ಯವಾಗಿಯೇ ಅವುಗಳನ್ನು ನಿಷ್ಕ್ರಿಯ ಮಾಡುವ ತಂತ್ರಜ್ಞಾನ ಇಸ್ರೆಲ್ ಮತ್ತು ಅಮೇರಿಕಾ ಹೊಂದಿವೆ. ಭಾರತವೂ ಹಿಂದೆ ಬಿದ್ದಿಲ್ಲ ಎಂದರು.
ನಮ್ಮ ನಮ್ಮ ಮಕ್ಕಳು ಸುರಕ್ಷಿತವಾಗಿರಬೇಕಾದರೆ ದೇಶ ಸುಭದ್ರವಾಗಿರಬೇಕು. ಸುಭದ್ರತೆ ವಿಚಾರದಲ್ಲಿ ರಾಜಿ ಅನ್ನೋದೇ ಇರಬಾರದು. ಈಗ ನಮ್ಮ ದೇಶ ಅದನ್ನೇ ಮಾಡುತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಲಕ್ಷಾಂತರ ಯುವಕರ ಪ್ರಾಣ ತ್ಯಾಗದಿಂದ. ಸ್ವಾತಂತ್ರ್ಯಕ್ಕಾಗಿ 23 ಸಾವಿರ ಸೈನಿಕರು ಬಲಿದಾನ ಮಾಡಿದ್ದಾರೆ. ಬಾವುಟ ಹಾರುವುದು ಗಾಳಿಯಿಂದಲ್ಲ. ಅದು ಸೈನಿಕರ ಉಸಿರಿನಿಂದ ಎಂದ ಅವರು ಈಗ ದೇಶ ಭಕ್ತಿ ಜಾಗೃತವಾಗಿದೆ ಅದನ್ನು ಮೆರೆಸುವ ಕೆಲಸವಾಗಬೇಕು ಎಂದರು.
ಯುದ್ಧ ಬಂಆಗ ಮಾತ್ರ ಸೈನಿಕರ ಬಗ್ಗೆ ಪ್ರೀತಿ, ಅಭಿಮಾನ ಇರಬಾರದು. ಅದು ಸದಾ ಇರಬೇಕು. ಸೈನಿಕರ ಕುಟುಂಬವನ್ನು ಪರೆಯುವ ಸಮಾಜ ನಮ್ಮದಾಗಬೇಕು. ಅಂತಹ ವ್ಯವಸ್ಥೆ, ಸೂಕ್ಷ್ಮತೆ ದೇಶದಲ್ಲಿ ನರ್ಮಾಣವಾಗಬೇಕು ಎಂದ ಅಸವರು ಕೇವಲ ದೇಶದ ಗಡಿ ಕಾಯ್ದರೆ ದೇಶ ಸೇವೆ ಅಂತ ತಿಳಿಯಬಾರದು. ಮೈಮೇಲೆ ಖಬರ್ ಇಟ್ಟುಕೊಂಡು ಓಟು ಹಾಕುವುದೂ ದೇಶ ಸೇವೆ. ದೇಶ ಯಾರ ಕೈಯಲ್ಲಿ ಸುಭದ್ರವಾಗಿರುತ್ತೋ ಅವರಿಗೆ ಓಟು ಹಾಕಿ ಎಂದು ಕರೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಷ್ಟ್ರದ ಸುರಕ್ಷತೆಯಲ್ಲಿ ಯೋಧರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪೆÇಲೀಸರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ದೇಶದ ಹೊರಗಿನ ಹಾಗೂ ದೇಶದ ಒಳಗಿನ ಸಮಾಜಘಾತುಕ ಶಕ್ತಿಗಳನ್ನು ಸದೆ ಬಡಿಯುವ ಶಕ್ತಿ ಯೋಧರು ಮತ್ತು ಪೆÇಲೀಸರಿಗಿದೆ. ಅಂತಹವರಿಗೆ ಗೌರವ ಕೊಡುವ ಕೆಲಸ ಆಗಲೇಬೇಕಿದೆ. ಇಂತದ್ದೊಂದು ಕೆಲಸ ಬಳ್ಳೇಕೆರೆ ಸಂತೋಷ್ ತಂಡ ಮಾಡುತ್ತಿರುವುದು ಪವಿತ್ರವಾದ ಕಾರ್ಯಕ್ರಮವಾಗಿದೆ ಎಂದರು. ನರೇಂದ್ರ ಮೋದಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಿದೆ. ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಪಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಹೆಡ್ ಲೈನ್ ಅಲ್ಲ, ಡೆಡ್ ಲೈನ್ ಎನ್ನುವ ರೀತಿಯಲ್ಲಿ ಮೋದಿಯವರು ಕಾರ್ಯ ಮಾಡಿ ಮುಗಿಸಿದ್ದಾರೆ ಎಂದು ಶ್ಲಾಘಿಸಿದರು.
ಥರ್ಡ್ ವಲ್ರ್ಡ್ ವಾರ್ ನಡೆಯುವ ಎಲ್ಲಾ ಮುನ್ಸೂಚನೆಗಳು ಇರುವಾಗ ಈ ಸಂದರ್ಭದಲ್ಲಿ ನಮ್ಮ ಕಾರ್ತವ್ಯ ಏನು ಎಂಬುದರ ಬಗ್ಗೆ ಯೋಚಿಸಬೇಕಿದೆ. ಅಗ್ನಿವೀರ್ ಯೋಜನೆ ಜಾರಿಗೆ ತಂದಿರುವುದು ಕೂಡ ಇಂತಹ ಸಂದರ್ಭದಲ್ಲಿ ಸಕಾಲಿಕವಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಸೈನಿಕರು ಹಾಗೂ ಪೆÇಲೀಸರಿಗೆ ಎಲ್ಲರೂ ಕೃತಜ್ಞರಾಗಿರುವಂತೆ ಕರೆ ನೀಡಿದರು.
10 ಜನ ಮಾಜಿ ಯೋಧರಿಗೆ, 12 ಜನ ಅತ್ಯುತ್ತಮ ಸೇವೆ ಸಲ್ಲಿಸಿದ ಪೋಲಿಸ್ ಸಿಬ್ಬಂದಿಯವರಿಗೆ 5 ಜನ ಕರ್ತವ್ಯದಲ್ಲಿ ಮಡಿದ ಪೋಲಿಸ್ ಸಿಬ್ಬಂದಿಗಳ ಕುಟುಂಬದವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಹುತಾತ್ಮರಾದ ಪೋಲಿಸ್ ಮತ್ತು ಸೈನಿಕರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲಕುಮಾರ್ ಭೂಮರೆಡ್ಡಿ, ಸಿ.ಎಸ್.ಷಡಾಕ್ಷರಿ, ಸಂತೋಷ್ ಬಳ್ಳೆಕೆರೆ ಮತ್ತಿತರರಿದ್ದರು.