ಶಿವಮೊಗ್ಗ : ಮುಸ್ಲಿಮರಿಗೆ ಗುಲಾಮರಾಗಿರುವ ರಾಜ್ಯ ಸರ್ಕಾರ ನಮ್ಮ ಕೊನೆಗಾಲವನ್ನು ಎದುರಿಸುತ್ತಿದೆ. ಹಿಂದೂಗಳು ಸುಮ್ಮನಿದ್ದರೆ ಇವರು ಸಾಬರಿಗೆ(ಮುಸ್ಲಿಮರಿಗೆ)ರಾಜ್ಯವನ್ನು ಮಾರಿಬಿಡುತ್ತಾರೆ. ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಇಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾದಾರಿತ ಮೀಸಲಾತಿಯನ್ನು ನೀಡಬಾರದು ಎಂದು ಸಂವಿಧಾನವೇ ಹೇಳಿದೆ. ಆದರೆ ಸಂವಿಧಾನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರು ಮುಸ್ಲಿಂರಿಗೆ ವಸತಿ ಯೋಜನೆಯೂ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿದೆ. ಈಗ ವಸತಿ ಯೋಜನೆಯಡಿ ಶೇ.15ರಷ್ಟು ಮೀಸಲಾತಿಯನ್ನು ನೀಡಲು ಹೋರಟಿದೆ ಇದಕ್ಕಾಗಿ ಕಾಯ್ದೆ ಮಾಡಲು ಯೋಚಿಸಿದ್ದು ರಾಜ್ಯಪಾಲರು ಈ ಕಾಯ್ದೆಗೆ ಯಾವುದೇ ಕಾರಣಕ್ಕೆ ಒಪ್ಪಿಗೆ ನೀಡಬಾರದು ಎಂದರು.

ಕಾಂಗ್ರೆಸ್ ಸರ್ಕಾರ ಒಂದು ಕಡೆ ಹಿಂದುಳಿದವರಿಗೆ, ದಲಿತರಿಗೆ ವಂಚಿಸಿ, ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುತ್ತಿದೆ. ಕಳೆದವರ್ಷ ಬಜೆಟ್ನಲ್ಲಿ 910 ಕೋಟಿ ಅವರಿಗಾಗಿ ಮೀಸಲಿಟ್ಟಿದ್ದಾರೆ. ಈ ವರ್ಷ ಅದನ್ನು 1913.97 ಕೋಟಿಗೆ ಹೆಚ್ಚಿಸಿದೆ. ವಿದ್ಯಾರ್ಥಿವೇತನ, ಶಾದಿಭಾಗ್ಯ, ಮುಲ್ಲಾಗಳಿಗೆ ಸಂಬಳ ಜಾಸ್ತಿ ಹೀಗೆ ಎಲ್ಲಾ ಕಡೆ ಮುಸ್ಲಿಂರ ಓಲೈಕೆ ಮಾಡುತ್ತಿದೆ. ಇದನ್ನು ಹಿಂದೂ ಸಮಾಜವೇ ಒಪ್ಪುವುದಿಲ್ಲ ಎಂದರು.

ಮತ್ತೊಂದು ಕಡೆ ಕಾಂಗ್ರೆಸ್ ನಾಯಕರುಗಳಾದ ಹೆಚ್.ಕೆ. ಪಾಟೀಲ್ ಮತ್ತು ಬಿ.ಆರ್. ಪಾಟೀಲ್ರವರು ಸರ್ಕಾರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ವಸತಿ ಯೋಜನೆಯಡಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಜಿ. ಪರಮೇಶ್ವರ್, ಬೋಸರಾಜ್ ಮುಂತಾದವರು ಇದಕ್ಕೆ ಬೆಂಬಲ ಕೂಡ ಕೊಟ್ಟಿದ್ದಾರೆ ಹಾಗಾಗಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ ಎಂದರು.

ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ಜೂ.25ರಂದು ರಾಷ್ಟ್ರಭಕ್ತ ಬಳಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರ ತನಿಖೆಯಾಗಬೇಕು ಸಂಬಂಧಪಟ್ಟ ಸಚಿವರುಗಳು ರಾಜೀನಾಮೆ ಕೊಡಬೇಕು. ಧರ್ಮಾದಾರಿತ ಮೀಸಲಾತಿ ಕೈಬಿಡಬೇಕು ಎಂಬುದು ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಜಾದವ್, ಮಹಾಲಿಂಗಶಾಸ್ತ್ರೀ, ಮೋಹನ್, ಕಾಚಿನಕಟ್ಟೆ ಸತ್ಯಣ್ಣ, ಅ.ಮ. ಪ್ರಕಾಶ್, ಶಿವಾಜಿ ಮುಂತಾದವರು ಇದ್ದರು.