ಶಿವಮೊಗ್ಗ.ಜೂನ್.09( ಇಂದು ಸೋಗಾನೆ, ಅರೆಕಟ್ಟೆ ಗ್ರಾಮ, ಕೆ.ಟಿ. ಶಾಮೇಗೌಡರ ಕ್ಯಾಂಪ್, ಕಾಚಿನಕಟ್ಟೆ ಗ್ರಾಮಗಳ ಎಡದಂಡೆ ಚಾನಲ್ ನೀರು ಮತ್ತು ಏರ್ಪೋಟ್ಯಿಂದ ಹೊರಬಿಡಲಾಗುತ್ತಿರುವ ಕಲುಷಿತ ನೀರು ತುಂಬಿ ರೈತರ ಜಮೀನುಗಳಿಗೆ, ತೋಟಗಳಿಗೆ ಹಾಗೂ ತೋಟದ ರಸ್ತೆಯ ಮೇಲ್ಬಾಗದಲ್ಲಿ ಹರಿಯುತ್ತಿದ್ದು ರೈತರುಗಳ ಜಮೀನಿನಲ್ಲಿ ಮಣ್ಣು ಸವಕಳಿಯಾಗುತ್ತಿದ್ದು ಬದು ಕುಸಿಯುತ್ತಿರುತ್ತದೆ. ಇದರ

ಪರಿಣಾಮವಾಗಿ ಅಡಿಕೆ ಮರಗಳ ಬುಡಗಳು ಮತ್ತು ಭತ್ತದ ಗದ್ದೆಗಳು ಮುಳುಗಡೆಯಾಗಿ, ರೈತರು ಬೆಳೆದ ಬೆಳೆಗಳನ್ನು ಸುಗಮವಾಗಿ ರಸ್ತೆಯಲ್ಲಿ ಸಾಗಿಸಲಾಗದೆ ಸಂಪರ್ಕ ಕಡಿತವಾಗಿರುತ್ತದೆ. ಸ್ಥಳೀಯ ಮನೆಗಳಿಗೆ ನೀರು ನುಗ್ಗುತ್ತಿದ್ದು, ಬೆಳೆದ ಬೆಳೆಗಳು ಹಾನಿಗೊಳಗಾಗುತ್ತ್ತಿದೆ. ಸಮಸ್ಯೆಯನ್ನು ಬಗೆಹರಿಸಿಕೊಡಲು ಅಧ್ಯಕ್ಷರು ಭದ್ರಾ ಕಾಡಾ ಕಚೇರಿಗೆ ಅಚ್ಚುಕಟ್ಟು ರೈತರುಗಳು ಮನವಿ ಮಾಡಿರುತ್ತಾರೆ.

ಈ ಮನವಿಯ ಮೇರೆಗೆ ಸದರಿ ಸಮಸ್ಯೆ ಬಗ್ಗೆ ಹರಿಸಲು ಹಾಗೂ ಸೂಕ್ತ ಪರಿಹಾರ ದೊರಕಿಸಲು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷರು, ಭೂ ಅಭಿವೃದ್ಧಿ ಅಧಿಕಾರಿಗಳು (ತಾಂತ್ರಿಕ) ಪ್ರಶಾಂತ್ ಕೆ, ಕಾರ್ಯಪಾಲಕ ಇಂಜಿನಿಯರ್ ಜಿ ಎಸ್ ಪಟೇಲ್, ಸಹಾಯಕ ಕಾರ್ಯ ಪಾಲಕ

ಇಂಜಿನಿಯರ್ ರುದ್ರಸ್ವಾಮಿ ಹಾಗೂ ಕಾರ್ಯಪಾಲಕ ಇಂಜಿನಿಯರ್ ಕರ್ನಾಟಕ ನೀರಾವರಿ ನಿಗಮ ನಿಯಮಿತ ರವಿ ಕುಮಾರ್ ಭದ್ರಾವತಿ,

ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾವತಿ ಹಾಗೂ ಅಧಿಕಾರಿ ಸಿಬ್ಬಂದಿಯವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಚ್ಚುಕಟ್ಟು ಭಾಗದ ರೈತರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕೊಡುವ ಬಗ್ಗೆ ಭರವಸೆ ನೀಡಲಾಯಿತು