ಶಿವಮೊಗ್ಗ.ಜೂನ್.09 ; ಇಂದು ಬೆಳಿಗ್ಗೆ 8.30 ರ ವೇಳೆಗೆ ಭದ್ರಾವತಿ ಮತ್ತು ಮಸರಹಳ್ಳಿ ರೈಲ್ವೆ ನಿಲ್ದಾಣದ ಮಧ್ಯೆ ಸುಮಾರು 45 ವಯಸ್ಸಿನ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಹೆಸರು, ವಿಳಾಸ, ವಾರಸ್ಸುದಾರರ ಕುರಿತು ಯಾವುದೇ ಸುಳಿವು ದೊರೆತಿರುವುದಿಲ್ಲ.

ಮೃತ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಸಾದಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕಪ್ಪು ಬಣ್ಣದ 02 ಇಂಚು ಉದ್ದದ ತಲೆ ಕೂದಲು, ಅರ್ಧ

ಇಂಚು ಕಪ್ಪು ಗಡ್ಡ, ಮೀಸೆ, ಬಲಗೈನಲ್ಲಿ ಹೂವಿನ ತರಹ ಕಾಣುವ ಹಚ್ಚೆ ಇರುತ್ತದೆ. ಮೃತ ವ್ಯಕ್ತಿಯು ನೀಲಿ ಬಣ್ಣದ ಪ್ಯಾಂಟ್, ಪಾಚಿ ಹಸಿರು ಕಪ್ಪು ಗ್ರೇ ಕಲರ್ ತುಂಬು ತೋಳಿನ ಶರ್ಟ್ ಧರಿಸಿರುತ್ತಾನೆ.

ಮೇಲ್ಕಂಡ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ

ದೂ.ಸಂ. 08182-222974 ಮೊ.ಸಂ.948082124 ಸಂಪರ್ಕಿಸುವಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.
——————