
ಸಾಂದರ್ಭಿಕ ಚಿತ್ರ/ ವಿಮರ್ಶೆಗಲ್ಲ
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 48
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ವಿಶ್ವಕ್ಕೆ ಮಹಾಮಾರಿಯಾಗಿ ಇಡೀ ವ್ಯವಸ್ಥೆಯನ್ನು ಹದಗೆಡಿಸಿ ಹೋಗಿದ್ದ, ಸಾವಿರಾರು ಜನರ ಪ್ರಾಣ ತೆಗೆದ ಕರೋನ ಎಂಬ ಮಹಾಮಾರಿ ಮತ್ತೆ ಬರುತ್ತಿದ್ದಾಳೆ. ಆಕೆಯನ್ನು ಅತ್ಯಂತ ಎಚ್ಚರಾವಸ್ಥೆಯಿಂದ ದೂರ ಇಟ್ಟು ನಾವು ಆರೋಗ್ಯವಂತರಾಗಿ ಬದುಕಲು ಮುಂದಾಗಬೇಕಿದೆ.

ಆ ಮೂರು ವರ್ಷಗಳ ಕಾಲ ಸಾಕಷ್ಟು ಜನರು ಕೈಲಾದ ಸಹಾಯವನ್ನು ಶಕ್ತಿಮೀರಿ ಮಾಡಿದ್ದಾರೆ. ಹಲವರನ್ನು ಬದುಕಿಸಿದ್ದಾರೆ. ಎಷ್ಟೋ ಜನ ತಾವು ಬದುಕಲು ಸ್ವಂತ ಹೆತ್ತವರನ್ನೇ ಆಸ್ಪತ್ರೆಗೆ ಹೋಗಿ ನೋಡದಂತೆ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದನ್ನ ನೋಡಿದ್ದೇವೆ. ಅಲ್ಲಿ ಎಷ್ಟು ಪಾಸಿಟಿವ್ ಹಾಗೂ ನೆಗೆಟಿವ್ ಮನಸುಗಳಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಎಷ್ಟೋ ಜನ ಅಂತ್ಯಕ್ರಿಯೆ ಇಲ್ಲದೆ ಯಾರದೋ ಕೈಲಿ ಅಂತ್ಯ ಸಂಸ್ಕಾರ ಮಾಡಿಸಿಕೊಂಡ ನಿದರ್ಶನಗಳನ್ನು ನೋಡಿದ್ದೇವೆ. ಇದೇ ಹೊತ್ತಿನಲ್ಲಿ ಸಹಾಯದ ನೆಪದಲ್ಲಿ ಕೆಲವೇ ಕೆಲವು ಕಿಡಿಗೇಡಿಗಳು ಅಲ್ಲಲ್ಲಿ ಎತ್ತುವಳಿ ದಂಧೆ ಮಾಡಿ ತಮಗೆ ತಮ್ಮ ಬೀಗರಿಗೆ ತಮ್ಮ ಬಂಧು ಬಳಗದವರಿಗೆ ಒಂದಿಷ್ಟು ಹಂಚಿ ಉಳಿದದ್ದನ್ನು ತಿಂದು ತೇಗಿದ ಹಲವು ನಿದರ್ಶನಗಳನ್ನು ನಾವು ಕಂಡಿದ್ದೇವೆ ಅಲ್ಲವೇ? ಇದೆ ಈ ವಾರದ ಅಂಕಣದ ವಿಷಯ ಕರೋನ ಹೆಸರಿನಲ್ಲಿ ಸಹಾಯದ ನೆಪ ನೀಡಿ ಇನ್ನೊಬ್ಬರ ಹತ್ತಿರ ಪಡೆದು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲವೇ ಕೆಲವು ವಿಕೃತ ಮನಸ್ಸುಗಳನ್ನು ಸಮಾಜಕ್ಕೆ ತಿಳಿಸುವ ಹಾಗೂ ಇಂತಹ ಮನಸ್ಸುಗಳಿಗೆ ಸ್ಪಂದಿಸದಂತಹ ಭಾವನೆಯನ್ನು ಈ ಭಗವಂತ ನೀಡಲೆಂದು ಕೋರುವುದು ನಮ್ಮ ಆಶಯ.

ಅಕ್ಕಿ ಬೇಳೆ ಬೆಲ್ಲ ಮೈದಾಹಿಟ್ಟು, ಸಕ್ಕರೆ ರೆವೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಕೊರೋನ ಪೀಡಿತರ ಅಸಹಾಯಕರ ಮನೆ ಬಾಗಿಲಿಗೆ ಹೋಗಿ ಕೊಟ್ಟ ಅದೆಷ್ಟೋ ಒಳ್ಳೆಯ ನಿದರ್ಶನಗಳ ನಡುವೆ ಇದೇ ಕರೋನ ಹೆಸರಿನಲ್ಲಿ ಸಹಾಯ ಮಾಡುವ ನೆಪ ನೀಡುತ್ತಾ ಎತ್ತುವಳಿ ಮಾಡಿದ್ದನ್ನು ದುರ್ಬಳಕೆ ಮಾಡಿಕೊಂಡ ಘಟನೆಗಳನ್ನು ಮರೆಯುವಂತಿಲ್ಲ ಅಲ್ಲವೇ?
ದಾಸ ಶ್ರೇಷ್ಠರಲ್ಲಿ ಅತ್ಯಂತ ಪ್ರಮುಖರಾದ ಪುರಂದರದಾಸರು ಹೇಳಿದ “ತಿರಿದು ದಾನವ ಮಾಡು” ಕೀರ್ತನೆಯನ್ನು ನಾವು ನಂಬಬೇಕು, ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ಆದರೆ ಅದೇ ಬಗೆಯಲ್ಲಿ ಇನ್ನೊಬ್ಬರ ಹತ್ತಿರ ಸಹಾಯ ಪಡೆದು ದಾನವನ್ನೇ ಮಾಡದಿದ್ದರೆ ಆ ಭಗವಂತ ಹೇಗೆ ತಾನು ಮೆಚ್ಚುತ್ತಾನೆ ಹೇಳಿ ಈ ಸಕಾರಾತ್ಮಕ ಹಾಗೂ ನಕಾರಾತ್ಮಕ ಮನಸುಗಳ ನಡುವೆ ನಮಗೆ ಕಣ್ಣಿಗೆ ಕುಕ್ಕುವ ಈ ನಕಾರಾತ್ಮಕ ಮನಸುಗಳು ನಮ್ಮನ್ನು ಪದೇ ಪದೇ ಕಾಡುತ್ತವೆ ಹಿಂಸಿಸುತ್ತವೆ ವಂಚಿಸುತ್ತವೆ. ಆದರೂ ನಾವು ಮೋಸ ಹೋಗುತ್ತಲೇ ಇದ್ದೇವೆ ಅಲ್ಲವೇ? ಅದು ಸಹಾಯ ಎಂಬ ಹೆಸರಿನ ನೆಪದಲ್ಲಿ ಕೊಡಬಾರದ ಬೇಕಿಲ್ಲದ ವಸ್ತುಗಳನ್ನು ಕೊಟ್ಟ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ.

ಅಂತಹ ಹೊತ್ತಿನಲ್ಲಿ ಘೋಷಿಸಿದ್ದ ಲಾಕ್ಡೌನ್ ಸಂದರ್ಭದಲ್ಲಿ ಅನ್ನ ನೀರು ಇಲ್ಲದೆ ನಮ್ಮ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ನಿಜಕ್ಕೂ ನಾವು ಗೌರವಿಸಬೇಕು. ಅಂತಹವರಿಗೆ ಕೈಲಾದರೆ ನೀರು ಇತರೆ ಆಹಾರ ಪದಾರ್ಥಗಳನ್ನು ನೀಡುವಂತಹ ಕಾರ್ಯ ನಡೆಯಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಹಾಗೆಯೇ ಊಟ ಇಲ್ಲದೆ ಅದೆಷ್ಟೋ ನತದೃಷ್ಟ ಬಡವರು ಹಾಗೂ ಅವರ ಕುಟುಂಬಕ್ಕೆ ಒಂದಿಷ್ಟು ಸಹಾಯ ಮಾಡುವ ಮನೋಭೋಮಿಕೆ ನಮ್ಮ ನಡುವೆ ಬೆಳೆಯಬೇಕು. ಆದರೆ ಅದರಲ್ಲೇ ಸ್ವಯಂ ಆಸ್ತಿಯನ್ನ ಹೆಚ್ಚಿಸಿಕೊಳ್ಳಬಾರದು ಅಲ್ಲವೇ? ಹಾಗಾಗಿ ನಾವು ಎಚ್ಚರಾವಸ್ಥೆ ವಹಿಸುವುದು ಅತ್ಯಂತ ಅಗತ್ಯ.







ಕೊಡುವುದಾದರೆ ನೀವೇ ಕೈಯಾರೆ ಕೊಟ್ಟುಬಿಡಿ ಇಲ್ಲವೇ ಕೇಳುವ ಅಥವಾ ಕೊಡುವ ವ್ಯಕ್ತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿ ಈತನಿಂದ ನಿಜಕ್ಕೂ ನೊಂದವರಿಗೆ ನೆರವಾಗುತ್ತದೆ ಎಂಬುದನ್ನು ಚಿಂತಿಸಿ ಆಲೋಚಿಸಿ ಕೊಡುವುದು ಅನಿವಾರ್ಯ ಹಾಗೂ ಅತ್ಯಗತ್ಯ. ಇಲ್ಲದಿದ್ದರೆ ಇಂತಹ ಘಾತುಕ ಚೆನ್ನಾಗಿ ಕೊಬ್ಬಿಕೊಂಡು ಬೆಳೆಯುತ್ತವೆ ಅಲ್ಲವೇ
ಅಂಕಣದಲ್ಲಿ ಯಾರನ್ನೂ ಮುಖ್ಯಪಾತ್ರದಾರಿಯನ್ನಾಗಿ ಮಾಡಿಕೊಂಡಿಲ್ಲ, ಸುಖಾ ಸುಮ್ಮನೇ ನೀವೇ ಪಾತ್ರದಾರಿಗಳೆಂದುಕೊಂಡ್ರೆ ನಾವು ಹೊಣೆಗಾರರಲ್ಲ- ಸಂ