ಸಂಗ್ರಹ ಚಿತ್ರ
ಶಿವಮೊಗ್ಗ : ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ದಡದಿಂದ ಬಚಾವ್ ಮಾಡಿದ್ದಾರೆ.

ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ನೋಡಿ ಶಿವಮೊಗ್ಗದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಭದ್ರಾನಾಲೆಗಳಲ್ಲಿ ನದಿಯ ಒಳಹರಿವು ಹೆಚ್ಚಾಗಿದ್ದು, ಜಿಂಕೆಯೊಂದು ನೀರಿಗೆ ಸಿಲುಕಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ.