ಶಿವಮೊಗ್ಗ : ನಿನ್ನೆ ರಾತ್ರಿ ೧೧ ಗಂಟೆ ಸುಮಾರಿಗೆ ಗೋಪಾಳದ ಮುಖ್ಯ ರಸ್ತೆಯ ದ ಬೇಕ್ ಅಂಡ್ ಫ್ಲೇಕ್ ಬೇಕರಿಯಲ್ಲಿ ಶಾರ್ಟ್ಸ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಂದಾಜು ಸುಮಾರು ೧೫ ಲಕ್ಷಕ್ಕೂ ಹೆಚ್ಚು

ಹಾನಿಯಾಗಿದೆ ಎಂದು ಮಾಲೀಕ ಹೆಚ್.ವಿ. ರಾಘವೇಂದ್ರ ತಿಳಿಸಿದ್ದಾರೆ.

ಬೇಕರಿಯಲ್ಲಿರುವ ಎ.ಸಿ., ಫ್ರಿಜ್, ಕೂಲರ್ಗಳು, ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಬಹುಭಾಗ ಬೆಂಕಿ ಅನಾಹುತಕ್ಕೆ ಸಂಪೂರ್ಣ ನಾಶವಾಗಿದ್ದು,

ಕೂಡಲೇ ಅಗ್ನಿಶಾಮಕ ದಳ ಆಗಮಿಸಿ, ಅಕ್ಕ-ಪಕ್ಕದ ಮಳಿಗೆಗಳಿಗೆ ಹಾನಿಯಾಗುವುದನ್ನು ತಡೆದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.