
ಶಿವಮೊಗ್ಗ, ಮಾ.25:
ಕಳೆದ ಮಾರ್ಚ್.22ರಿಂದ ಸುಮಾರು ಒಂದು ತಿಂಗಳ ಕಾಲ ಪದವಿ ಪರೀಕ್ಷೆಗಳು ನಡೆಯುತ್ತಿವೆ. ಇದರ ನಡುವೆ ಬರುವ ಮಾ.28ರಿಂದ ಏ.02ರವರೆಗೆ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷಾ ಮಂಡಳಿಯ ಕಂಪ್ಯೂಟರ್ ಪರೀಕ್ಷೆಗಳು ಸಹ ನಡೆಯುತ್ತಿವೆ.
ಯಾವುದೇ ಕಲಿಕೆಯ ಜೊತೆ ಶಿಕ್ಷಣ ಪಡೆಯುವ ಅಪಾರ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ಕಂಪ್ಯೂಟರ್ ಪರೀಕ್ಷೆಯನ್ನು ಹೇಗೆ ಎದುರಿಸುತ್ತಾರೆ. ಒಂದೇ ಅವಧಿಯಲ್ಲಿ 2 ಪರೀಕ್ಷೆಗಳಿದ್ದರೆ ವಿದ್ಯಾರ್ಥಿ ದ್ವಿಪಾತ್ರದಲ್ಲಿ ನಟಿಸಲು ಸಾಧ್ಯವೇ..?
ಚಿಕ್ಕ ಪರಿಜ್ಞಾನವಿಲ್ಲದ ಶಿಕ್ಷಣ ಇಲಾಖೆ ಹಾಗೂ ನಮ್ಮನ್ನಾಳುವ ಜನಪ್ರತಿನಿಧಿಗಳು, ಎಸಿ ಕೊಠಡಿಯ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸುವ ಆಧಿಕಾರಿಗಳಿಗೆ ಇಂತಹದೊಂದು ಅವಘಡವಾಗಬಹುದು. ವಿದ್ಯಾರ್ಥಿಯ ಭವಿಷ್ಯ ಹೇಗೆ ಕಟ್ಟಿಕೊಳ್ಳಲು ಸಾದ್ಯ ಎಂಬುದನ್ನು ಚಿಂತಿಸದಿರುವುದು ದುರಂತವೇ ಹೌದು.
ಕೂಡಲೇ ಸಮಯ ಹೊಂದಾಣಿಕೆ ಮಾಡುವ ಅಗತ್ಯವಿದೆ.