ಶಿವಮೊಗ್ಗ,ಏ.೨೨:ಹಲವಾರು ಅಪಘಾತಗಳಾಗುತ್ತಿರುವ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಹಾಸ್ಪಿಟಲ್ ಮುಂಭಾಗ ಚೆಕ್ ಪೋಸ್ಟ್ ಅನ್ನು ಹಾಕುವಂತೆ ಹಾಗೂ ನಗರದ ನಗರದವಿವಿಧಡೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮುಂಭಾಗ ಹಲವಾರು ತಿಂಗಳುಗಳಿಂದ ದೊಡ್ಡ ರಸ್ತೆ ಅಪಘಾತಗಳು ಸಂಭವಿಸಿದೆ. ಈ ರಸ್ತೆ

ಅಪಘಾತಗಳಲ್ಲಿ ಸಾರ್ವಜನಿಕರಿಗೆ ದೊಡ್ಡ ಮಟ್ಟದ ನಷ್ಟವಾಗಿದೆ. ವಾಹನಗಳಿಗೆ ವೇಗ ತಗ್ಗಿಸುವಂತಹ ಕೆಲಸ ಮಾಡುವುದಕ್ಕಾಗಿ ಆಸ್ಪತ್ರೆ ಮುಂಭಾಗದಲ್ಲಿ ಬ್ಯಾರಿಕೆಡ್ ಅಳವಡಿಸಿ ವೇಗ ನಿಯಂತ್ರಿಸಬೇಕು. ನಗರದ ಹಲವಾರು ಸಿಗ್ನಲ್ಗಳಲ್ಲಿ ಡಿಜಿಟಲ್ ಸಂಖ್ಯೆಗಳು ಬರುವುದು ನಿಂತು ಹೋಗಿದ್ದು ಅದನ್ನು ಸಹ ದುರಸ್ತಿ ಮಾಡಬೇಕು. ವಾಹನ ಸವಾರರು ಸಿಗ್ನಲ್ ಜಂಪ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಅತಿ ವೇಗದ

ಸವಾರಿಯಿಂದ ಅನಾಹುತ ಗಳಾಗುತ್ತಿದ್ದು ಸವಾರರು ತಕ್ಷಣ ಬ್ರೇಕ್ ಹಾಕುವುದರಿಂದ ಹಲವು ಅಪಘಾತಗಳು ಹೆಚ್ಚಾಗುತ್ತಿವೆ. ಹೂವಿನ ಮಾರ್ಕೆಟ್ ಬಳಿ ಇರುವ ಬಹು ಮಹಡಿ ಪಾಕಿಂಗ್ ಕಟ್ಟಡವನ್ನು ಪಾಕಿಂಗಿಗೆ ವ್ಯವಸ್ಥೆ ಮಾಡಿಕೊಡಬೇಕು ಸೇರಿದಂತೆ ಸುಗಮ ಸಂಚಾರಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಧುಸೂಧನ್ ಎಸ್ ಎಂ. ನಯಾಜ್ ಎಂ ಗೋಪಿ.ಕಿರಣ್ ವೆಂಕಟೇಶ್ ಜಯಕೀರ್ತಿಗೋಗಿ ಶರತ್ ಕೌಶಿಕ್ ಲಿಂಗರಾಜು ನೂರುಲ್ಲ.ಮಂಜುನಾಥ್ ಶಶಿಧರ್ ಲೋಕೇಶ್ ರಾಹುಲ್ ಅಭಿಷೇಕ್ ಕಾರ್ತಿಕ್ ಮತ್ತಿತರರು ಇದ್ದರು.