ಶಿವಮೊಗ್ಗ : ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.1 ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ರಾಯಲ್ ಸ್ಟ್ರೈಕರ್ಸ್ ನಿಂದ ಮೊದಲನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾ.20ರ ಶನಿವಾರ ಹಾಗೂ ಮಾ.21ರ ಭಾನುವಾರ ಆಯೋಜಿಸಲಾಗಿದೆ.
ಪ್ರತಿ ಪಂದ್ಯ ನಾಲ್ಕು ಓವರ್ ಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರವೇಶ ಶುಲ್ಕ 999 ರೂ.ಗಳಾಗಿದ್ದು, ಪ್ರಥಮ ಬಹುಮಾನ ಆಕರ್ಷಕ ಟ್ರೋಫಿಯೊಂದಿಗೆ 14999 ಹಾಗೂ ದ್ವಿತೀಯ ಬಹುಮಾನ 9999 ರೂ.ಗಳಾಗಿದ್ದು, ಪ್ರತಿ ಪಂದ್ಯಕ್ಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 6363420017, 6362617598, 9380841954, 9482369512 ಗೆ ಸಂಪರ್ಕಿಸಿ.

