
ಹೊಸನಗರ: ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಕೊಪ್ಪ ಗ್ರಾಮದ ಶ್ರೀನಿವಾಸ್ ಕಾಮತ್ರವರ ಒಡೆತನಕ್ಕೆ ಸೇರಿದ ತೆಂಗಿನ ಮರಕ್ಕೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ ವಿದ್ಯುತ್ ಬೆಂಕಿ ತಲುಗಿದ್ದು ಬಾರೀ ಅನಾಹುತದಿಂದ ಗ್ರಾಮದ ಜನತೆ ಪಾರಾಗಿದ್ದಾರೆ

ಭಾನುವಾರ ಸಂಜೆ ಸುಮಾರು ೭ಗಂಟೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ ಸಂದರ್ಭದಲ್ಲಿ ಹೊಸನಗರದ ಸರ್ಕಲ್ ಇನ್ಸ್ಪೇಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರು ಗುಸ್ತು ತಿರುಗುವ ಸಂದರ್ಭದಲ್ಲಿ ಗ್ರಾಮಸ್ಥರು ಗುಂಪು ಸೇರಿರುವ ದೃಶ್ಯ ಅವರ ಕಣ್ಣಿಗೆ ಬಿದ್ದಿದ್ದು ತಕ್ಷಣ ಸ್ಥಳಕ್ಕೆ ಬೇಟಿ

ನೀಡಿದಾಗ ತೆಂಗಿನಮರಕ್ಕೆ ಬೆಂಕಿ ಬಿದ್ದಿರುವ ದೃಶ್ಯ ನೋಡಿ ಗುರಣ್ಣನವರು ತಕ್ಷಣ ೧೧೨ಗೆ ಮೆಸ್ಕಾ ಇಲಾಖೆಯ ಸಹಾಯಕ ಇಂಜೀನೀಯರ್ ಚಂದ್ರಶೇಕರ್ರವರಿಗೆ ಹಾಗೂ ಅಗ್ನಿ ಶಾಮಕದಳದ

ಸಿಬ್ಬಂದಿಗೆ ಪೋನ್ ಕಾಲ್ ಮಾಡಿ ಮಾವಿನಕೊಪ್ಪ ಗ್ರಾಮಕ್ಕೆ ವಿದ್ಯುತ್ ಕಲೆಕ್ಷನ್ ತೆಗೆಯುವ ಒಳಗೆ ಆಗ್ನಿ ಶಾಮಕದಳದ
ಸ್ಥಳಕ್ಕೆ ಆಗಮಿಸಿ ಬೆಂಕಿ ಹತ್ತಿರುವ ತೆಂಗಿನ ಮರಕ್ಕೆ ಹತ್ತಿರುವ ಬೆಂಕಿ ನಂದಿಸಿ ಬಾರೀ ಅನಾಹುತದಿಂದ ಪಾರು ಮಾಡಿದ್ದಾರೆ.