

ಹನಿ ಟ್ರಾಪ್ ನ ವಿಚಾರವನ್ನು ಮುಂದಿಟ್ಟುಕೊಂಡು ಸದನದ ಗೌರವಾನ್ವಿತ ಪೀಠಕ್ಕೆ ಅವಮಾನ ಮಾಡಿದ ಅಗೌರವ ನೀಡಿದ ಯಾರನ್ನೇ ಆಗಲಿ ಸುಮ್ಮನೆ ಬಿಡಬಾರದು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

ಅಧಿವೇಶನದ ಕೊನೆಯ ದಿನ ತೆಗೆದುಕೊಂಡ ಈ ಅಮಾನತ್ತು ಆದೇಶ ನಿಮ್ಮದೋ ಅಥವಾ ಮುಖ್ಯಮಂತ್ರಿಗಳು ತಮ್ಮ ಕೈ ಹಿಡಿದು ಬಲವಂತದಿಂದ ಬರೆಸಿದ್ದೋ? ಏನೇ ಆದರೂ ತಮ್ಮ ಈ ನಿರ್ಣಯ ಸಂಸದೀಯ ಪ್ರಜಾಪ್ರಭುತ್ವದ ಪಾಲಿಗೆ ಶಾಶ್ವತ ಕಪ್ಪುಚುಕ್ಕೆ ಎಂದು ಲಿಖಿತವಾಗಿ ದೂರು ನೀಡಿರುವ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಬಹಿರಂಗವಾಗಿ ಸದನದ ಪೀಠದ ವಿರುದ್ಧ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಲಿಖಿತವಾಗಿ ಪೀಠಕ್ಕೆ ಮಾಡಿದ ಅವಮಾನ, ಆಗೌರವದ ಪ್ರಶ್ನೆ ಮುಖ್ಯ. ವಿಚಾರದಲ್ಲಿ ಯಾರು ವಿರುದ್ಧ ಕ್ರಮ ಕೈಗೊಳ್ಳಲಿ ಪೀಠಕ್ಕೆ ಅಗೌರವ ತೋರಿದ ಎಲ್ಲಾ ನಾಯಕರ ವಿರುದ್ಧ ಮೊದಲು ಶಿಸ್ತು ಕ್ರಮ ಕೈಗೊಳ್ಳಬೇಕು. ಹನಿ ವಿಚಾರದಲ್ಲಿ ಪೀಠದ ಗೌರವದ ವಿಚಾರ ಮರೆಯಾಗದಿರಲಿ.
- ಆಯನೂರು ಮಂಜುನಾಥ್,
ಮಾಜಿ ಸಂಸದರು, ಕೆಪಿಸಿಸಿ ವಕ್ತಾರರು,
ಶಿವಮೊಗ್ಗ