
ಶಿವಮೊಗ್ಗ : ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಸಂಪನ್ನಗೊಂಡ ‘ಉತ್ಥಾನ – 2025’ ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ತಂಡ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದ್ದಾರೆ.


ಬೀದಿ ನಾಟಕ (ಪ್ರಥಮ), ಡುಯೆಟ್ ಸಾಂಗ್ (ತೃತೀಯ), ಸಮೂಹ ನೃತ್ಯ (ಪ್ರಥಮ, ತೃತೀಯ) ರಸಪ್ರಶ್ನೆ (ತೃತಿಯ) ಫೋಟೋಗ್ರಾಫಿ (ಪ್ರಥಮ), ಆ್ಯಡ್ ಜ್ಯಾಪ್ (ಪ್ರಥಮ), ಫೈನಾನ್ಸ್ (ಪ್ರಥಮ ಸ್ಥಾನ), ಟೀಮ್ ಬಿಲ್ಡ್ (ಪ್ರಥಮ),

ಷಟಲ್ ಬ್ಯಾಡ್ಮಿಂಟನ್ (ದ್ವಿತೀಯ) ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಒಟ್ಟಾರೆ ಕಾಲೇಜಿನ ಬಿಕಾಂ, ಬಿಬಿಎ ಮತ್ತು ಬಿಸಿಎ ವಿಭಾಗದ 82 ಕ್ಕು ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್ ನಾಗರಾಜ ವಿಜೇತ ತಂಡಕ್ಕೆ ಬಹುಮಾನ ನೀಡಿದರು.

ವಿದ್ಯಾರ್ಥಿಗಳ ತಂಡಕ್ಕೆ ಎನ್ಇಎಸ್ ಆಡಳಿತ ಮಂಡಳಿ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.