ಶಿವಮೊಗ್ಗ, ಮಾ.12:
ಕೊಟ್ಟ ಮಾತಿನಂತೆ ಮಾಜಿ ಉಪಮುಖ್ಯಮಂತ್ರಿ, ಇಡೀ ರಾಜ್ಯದಲ್ಲಿ ಹೊಸತನದ ಮೂಲಕ ರಾಷ್ಟ್ರ ಭಕ್ತ ಬಳಗವನ್ನೇ ಬೆಳೆಸಿದ ಹಾಗೂ ಹಿಂದೂ ಸಮಾಜದ ಉದ್ದಾರಕ್ಕೆ ಕಂಕಣಬದ್ಧರಾದ ಕೆ ಎಸ್ ಈಶ್ವರಪ್ಪ ಅವರು ಅಪಘಾತದಲ್ಲಿ ನೊಂದವನ ಆಟೋ ಖರೀದಿಗೆ ಅತಿ ದೊಡ್ಡ ಸಹಾಯ ಮಾಡಿರುವ ಘಟನೆ ವರದಿಯಾಗಿದೆ.

ಇತ್ತೀಚೆಗೆ ಅಪಘಾತಕ್ಕೀಡಾದ ಯುವಕನಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಹಾಗೂ ಪುತ್ರ ಕೆ.ಈ.ಕಾಂತೇಶ್ ರವರು ಆಶ್ವಾಸನೆ ನೀಡಿದಂತೆ ನವುಲೆಯ ತ್ರಿಮೂರ್ತಿ ನಗರದ ಯುವಕ ಮಧು. ಕೆ ರವರಿಗೆ ಸ್ವಂತ ದುಡಿಮೆಯಿಂದ ಬದುಕಲು ತಮ್ಮ ವೈಯಕ್ತಿಕ

ಸಹಾಯದಿಂದ ನೂತನ ಅಟೋ ರಿಕ್ಷಾ ಖರೀದಿಗೆ 53 ಸಾವಿರ ರೂ. ಸಹಾಯಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಾರ್ವಜನಿಕರು ಈ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಒಮ್ಮೆ ಮಾತುಕೊಟ್ಟರೆ ಅದಕ್ಕೆ ಬದ್ದರಾಗಿರುತ್ತಾರೆ ಎಂಬುದಕ್ಕೊಂದು ಚಿಕ್ಕ ಸಾಕ್ಷಿ ಇದು.