ಶಿವಮೊಗ್ಗ,ಮಾ.11: ತರೀಕೆರೆ ಮತ್ತು ಮರಸಹಳ್ಳಿಯ ರೈಲು ನಿಲ್ದಾಣಗಳÀ ಮಧ್ಯೆ ದಿ.14-09-2024 ರಂದು ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆಂದು ವರದಿ ಮಾಡಲಾಗಿದೆ.

ಮೃತ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ

ತಲೆಕೂದಲು ಹಾಗೂ ಕುರುಚಲು ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡಮೀಸೆ ಬಿಟ್ಟಿದ್ದು, ಕಡುಗಿಣಿ ಹಸಿರು ಬಣ್ಣದ

ರೆಡಿಮೇಡ್ ಟೀ-ಶರ್ಟ್, ಗಿಣಿ ಹಸಿರು ಬಣ್ಣದ ಚೆಕ್ಸ್ ಗೆರೆಗಳಿರುವ ಪಂಚೆ ಹಾಗೂ ಗಿಣಿ ಹಸಿರು ಮತ್ತು ಬಿಳಿ ಬಣ್ಣದ ಉದ್ದಗೆರೆಗಳಿರುವ ಟವೆಲ್ ಇರುತ್ತದೆ. ಮೆಗ್ಗಾನ್ ಆಸ್ಪತ್ರೆಯ

ಶವಾಗಾರದಲ್ಲಿ ದೇಹವನ್ನು ಇರಿಸಲಾಗಿದೆ. ಈ ವ್ಯಕ್ತಿಯ ವಾರಸುದಾರರು


ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ಇನ್ಸ್ಪೆಕ್ಟರ್ನ ದೂ.ಸಂ: 08182222974 ನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.