ಹುಡುಕಾಟದ ವರದಿ
ಭದ್ರಾವತಿ, ಫೆ.27:
ಭದ್ರಾವತಿ ನಗರಸಭೆಯ ಕಿರಿಕ್ ಸಣ್ಣ ಪ್ರಮಾಣದಿಂದಲೇ ಶುರುವಾಗಿದೆ. ಇಲ್ಲಿನ ನಗರಸಭೆ ಒಂದು ಪತ್ರವನ್ನು ಕಳಿಸಲು ಹಾಕುವ ದೂರವಾಣಿ ಸಂಖ್ಯೆ ವಜಾ ಆಗಿ ಅದೆಷ್ಟೋ ವರ್ಷ ಆಗಿದೆ ಎಂದರೆ ಈ ನಗರಸಭೆ ಜೀವಂತವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ ಅಲ್ಲವೇ?



ನಗರದ ನಾಗರಿಕರಿಗೆ ಸ್ಪಂದಿಸಬೇಕಿರುವ ಈ ದೂರವಾಣಿ ಕರೆ ಭದ್ರಾವತಿ ನಗರಸಭೆ ಕಾರ್ಯಾಲಯ, ರವಾನೆ ಸಹಾಯಕರು, ಭದ್ರಾವತಿ 577 301, ಶಿವಮೊಗ್ಗ ಜಿಲ್ಲೆ ಹೆಸರಿನಲ್ಲಿ ರವಾನೆ ಆಗುತ್ತದೆ. ಅದಕ್ಕೆ ಕೊಟ್ಟಿರುವ ಫೋನ್ ನಂಬರ್ ಅದು ಸಹ ಬಿಎಸ್ಎನ್ಎಲ್ ಲ್ಯಾಂಡ್ಲೈನ್ ಆಗಿದ್ದು 08282 266356 ಆಗಿರುತ್ತದೆ.

ಆದರೆ ಇದು ಬಿಎಸ್ಎನ್ಎಲ್ ಕಚೇರಿಯ ಮಾಹಿತಿ ಮೂಲಗಳ ಪ್ರಕಾರ ವಜಾ ಆಗಿ ಸುಮಾರು ವರ್ಷಗಳಾಗಿವೆಯಂತೆ. ಇದು ನಿಜವಾಗಿಯೂ ಸಂಪರ್ಕದ ನಂ ಹಾಕಬೇಕಿತ್ತು, ಕಾಟಾಚಾರಕ್ಕೆ ಪತ್ರ ಕಳಿಸೋದಾದರೆ ಅಷ್ಟೊಂದು ಜನ ಕೆಲಸಗಾರರ ಅಗತ್ಯವೇನಿತ್ತು?
ಎಂಬುದು ಒಂದು ಮೊದಲ ಪಬ್ಲಿಕ್ ಪ್ರಶ್ನೆ.