
“
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 34
ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಜಗತ್ತು ಎಷ್ಟು ವಿಚಿತ್ರ ನೋಡ್ರಿ, ಈ ಪ್ರಪಂಚದಲ್ಲಿ ಪಾಪ ಮಾಡಿದವನೇ ವೇದ ಹೇಳ್ತ ಪುಣ್ಯದ ಮಾತಾಡ್ತಾನೆ. ಈ ಜಗದ ನಿಯಮಗಳು ಅತ್ಯಂತ ಚಿತ್ರ ವಿಚಿತ್ರವಾಗಿದೆ. ಒಂದೆಡೆ ವಂಚನೆ, ಮೋಸ,ಅನ್ಯಾಯದ ಮೂಲಕ ಬದುಕುತ್ತಾ ಹಾಗೆಯೇ ಪುಣ್ಯದ ಮಾತನಾಡುತ್ತಾನೆ ಎಷ್ಟೊಂದು ದುರಂತದ ವಿಭಿನ್ನ ಬದುಕನ್ನ ನೋಡಿ. ಹೇಳುವುದು ಆಚಾರ, ಮಾಡುವುದು ಅನಾಚಾರ ಎಂಬಂತಹ ವಿಷಯವೇ ಇಂದಿನ ನೆಗೆಟಿವ್ ಥಿಂಕಿಂಗ್ ಅಂಕಣದ ವಿಶೇಷ.
ನಮ್ಮ ನಡುವಿನ ಕೆಲವರ ಇಂತಹ ವರ್ತನೆ ನಮಗೆ ಗೊತ್ತಿರುತ್ತದೆ. ಆದರೆ ಅವರ ಪುಕ್ಕಟ್ಟೆಯಾದ ವೇದದ ಮಾತನ್ನು ನಾವು ನಂಬುತ್ತಿರುವುದು ಮತ್ತೊಂದು ಕಡೆ ನಮಗೆ ನಾವೇ ಬಗೆದುಕೊಂಡ ದ್ರೋಹ ಎಂದರೆ ತಪ್ಪಾಗಲಾರದಲ್ಲವೇ?
ಹಿಂದಿನ ಕೆಲ ನೆಗಿಟೀವ್ ಥಿಂಕಿಂಗ್ ಅಂಕಣ ನೋಡಿ






ಇನ್ನೊಬ್ಬರ ಸಹಾಯಕ್ಕೆ ನಾನು ಮುಂದಿದ್ದೇನೆ ಎಂದು ಎಲ್ಲರಿಂದ ತಿರಿದು ಅದರಲ್ಲಿ ಒಂದಿಷ್ಟನ್ನು ಸ್ವಾಹ ಮಾಡಿ ಉಳಿದ ಒಂದಿಷ್ಟನ್ನು ಕೊಟ್ಟಂತೆ ನಾಟಕವಾಡುವ ಸಾಕಷ್ಟು ಜನರು ನಮ್ಮ ನಡುವೆ ಈಗಲೂ ಕಾಣಿಸುತ್ತಿದ್ದಾರೆ. ಇಲ್ಲಿ ಲೆಕ್ಕವೇ ಸಿಗದಂತಹ ಪರ್ಸನಲ್ ಆದ ಚಿತ್ರ ವಿಚಿತ್ರ ವ್ಯವಹಾರಗಳು ಅದರ ಮೂಲಕ ಅವರು ಗೂಡು ಕಟ್ಟಿಕೊಳ್ಳುವ, ಇಲ್ಲವೇ ನಾನಾ ದಂಧೆ ನಡೆಸುವ ಬದುಕು ಕಾಣಿಸಿಕೊಳ್ಳುತ್ತದೆ.
ಪುರಂದರದಾಸರೇ ಹಿಂದೆ ಹೇಳಿದ್ದ ದಾಸ ಸಾಹಿತ್ಯಕ್ಕೆ ಇತಿಶ್ರೀ ಹಾಡಿದ ನಿದರ್ಶನ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ತಿರಿದು ದಾನವ ಮಾಡು ಎಂದದ್ದು ತಿರಿದದ್ದನ್ನು ಸರಿಯಾಗಿ ಕೊಡು. ತಿರಿದು ನೀನು ತಿನ್ನಬೇಡ ಎಂದು ಹೇಳಿದ್ದರು. ಆದರೆ ಇನ್ನೊಬ್ಬರ ಅಸಹಾಯಕತೆಯನ್ನು, ಸಮಸ್ಯೆಯನ್ನು ಮುಂದಿಟ್ಟುಕೊಂಡು ತಮ್ಮದೇ ಗತ್ತಿನಲ್ಲಿ ಎತ್ತುವಳಿ ದಂದೆ ಮಾಡುವ ಬಹಳಷ್ಟು ಮಂದಿ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾರೆ.

ಇವರು ಹೊರಜಗತ್ತಿನಲ್ಲಿ ಹೇಳುವುದು, ಮಾತನಾಡುವುದು ಎಲ್ಲವೂ ಆಚಾರ ಹಾಗೂ ದೈವ ಪ್ರೇರಣೆ ಎಂದೇ ತೋರಿಸಿಕೊಳ್ಳುತ್ತಾರೆ. ಹಾಗೆಯೇ ಒಳಗೊಳಗೆ ತಮ್ಮದೇ ಆದ ಬದುಕು ಕಟ್ಟಿಕೊಳ್ಳುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ ಸಂಗತಿ ಅಲ್ಲವೇ?
ಮತ್ತೊಂದು ವಿಚಿತ್ರ ಗೊತ್ತೆ? ಯಾರಿಗೂ ಸಹಾಯ ಮಾಡುತ್ತೇವೆ ಎಂದು ಇನ್ಯಾರದೋ ಫೋನ್ ಪೇ, ಗೂಗಲ್ ಪೇ ನಂಬರ್ ಕೊಡುವ ಒಂದು ಬಗೆಯ ಒಳ ಸಂಚು ನಮ್ಮ ನಡುವೆ ನಮಗೆ ಗೊತ್ತಾಗದೆ ನಡೆಯುತ್ತಿದೆ. ಸಹಾಯ ಮಾಡುವ ನೆಪದಲ್ಲಿ ಕೇಳಿದ್ದನ್ನು ಅಯ್ಯೋ ಪಾಪ ಎಂದು ಮುಗ್ಧ ಮನದ ಜನ ಕೊಟ್ಟುಬಿಡುತ್ತಾರೆ. ಆದರೆ ಅದು ನೋಂದವನಿಗೆ ಹೋಗುತ್ತೋ ಇಲ್ಲವೋ? ಯಾರೂ ಅದನ್ನು ಸಂಪೂರ್ಣವಾಗಿ ನೋಡುವುದಿಲ್ಲ. ಅದರತ್ತ ಮತ್ತೆ ಯೋಚಿಸುವುದಿಲ್ಲ. ಅದೇ ಕೆಲವರ ಎತ್ತುವಳಿ ದಂಧೆಯಾಗಿದೆ ಎಂಬುದು ನಮ್ಮ ನಡುವಿನ ಕರ್ಮ.
ಓದುಗರೊಬ್ಬರ ಮನದ ಮಾತು
“ಕೊಟ್ಟದ್ದರಿಂದ ಬಚಾವಾಗಲು ಕೆಲ ಕಿತ್ತೋದವರಿಂದ ಹೊಸ ನಾಟ್ಕ..!?”
ಈ ಜಗತ್ತಿನ ಸಾಕಷ್ಟು ಜನ ನೀತಿ ನಿಯತ್ತಿಗೆ ಗೌರವಕ್ಕೆ ಸದಾ ಕಾಲ ಸ್ಪಂದಿಸುತ್ತಲೇ ಇರುತ್ತಾರೆ. ಸಮಾಜದ ಗೌರವಕ್ಕೆ ಸದಾ ತಗ್ಗಿ ಬಗ್ಗಿ ನಡೆಯುತ್ತಾರೆ. ಆದರೆ ಕೆಲವೇ ಕೆಲವರು ಅದೂ 0.1 ಅಥವಾ 0.2 ರಷ್ಟು ಜನ ಪಡೆದದ್ದನ್ನು ಕೊಡದೆ ಬಚಾವಾಗುತ್ತಾರೆ.
ಮೊದಲು ಕೊಡುವ ವಿಚಾರದಲ್ಲಿ ದಿನದೊಡುತ್ತಾರೆ. ನಂತರ ಅವರದೇ ನಾನಾ ಸಂಕಷ್ಟ ಹೇಳುತ್ತಾರೆ. ನಂತರ ಕೊಟ್ಟವನು ಹೀಗೆಂದ ಅವನು ಬೇರೆಯವರ ಬಳಿ ಏನೇನೋ ಹೇಳಿದ್ದಾನೆ. ನಾ ಕೊಡೋದೇ ಇಲ್ಲ ಅಂದು ಕೊಟ್ಟವನ ಪರವಾಗಿ ಕೊಡು ಎಂದು ಹೇಳಿದ್ದಕ್ಕೆ ಹೇಳಿ ಅತ್ಯಂತ ಸುಲಭವಾಗಿ ಸಲೀಸಾಗಿ ಕಂಡವರ ಗಲೀಜಲ್ಲಿ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದು ನಮ್ಮ ನಡುವಿನ ದುರಂತವಲ್ಲವೇ?

ಇದು ನೆಗೆಟಿವ್ ಥಿಂಕಿಂಗ್ ಅಂಕಣದ ನಿರಂತರ ಓದುಗರಲ್ಲಿ ಒಬ್ಬರ ಮನದ ಮಾತು. ಅವರು ಯಾರಿಗೂ ಗೆಳೆಯನೊರ್ವನ ಅನಿವಾರ್ಯಕ್ಕೆ ಸ್ಪಂದಿಸಿ ಯಾವುದೋ ಚಿಕ್ಕ ಧನ ಸಹಾಯ ಮಾಡಿರುತ್ತಾನೆ. ಇದು ಸಹಾಯವಲ್ಲ ಮತ್ತೆ ಕೊಡಬೇಕೆಂಬ ನಿರ್ಧಾರ ಕೊಟ್ಟವನು ಹೇಳುವುದಕ್ಕಿಂತ ಮುಂಚೆ ಈ ತಿಂಗಳಲ್ಲಿ ನಿಮ್ಮ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಹೇಳಿಬಿಡುತ್ತಾನೆ.
ಆದರೆ ಅಲ್ಲಿಂದ ನಿರಂತರವಾಗಿ ದಿನದೊಡುತ್ತಾ ಮುಂದಿನ ವಾರ, ಮುಂದಿನ ತಿಂಗಳು, ನಾಳೆ ಎನ್ನುತ್ತಾ ಕಾಲ ತಳ್ಳುತ್ತಾನೆ. ಕೊಟ್ಟವನು ಸ್ಥಿತಿವಂತ ಏನಲ್ಲ. ಅವನ ಅನಿವಾರ್ಯಕ್ಕೆ ಹಣದ ಅಗತ್ಯವಿರುತ್ತದೆ. ಕೇಳಿದಾಗ ಒಂದಿಷ್ಟು ಮಾತು ಖಾರವಾಗಿರುತ್ತದೆಯಲ್ಲವೇ?

ಪಡೆದಬದೂ ಮಾಮೂಲಿಯಾದ ಬದುಕಲ್ಲವೇ? ಆದರೆ, ಅದನ್ನೇ ಲಾಭ ಮಾಡಿಕೊಂಡು ಪಡೆದವನು ನೀನು ಹೀಗಂದೆ ಹಾಗಂದೆ ಎಂದು ಅಲ್ಲಿಂದ ತಪ್ಪಿಸಿಕೊಂಡು ಕಂಡೋರ ತಟ್ಟೆಯಲ್ಲಿ ಅಂಬಲಿ ಕುಡಿಯುತ್ತಾನೆ ಎಂಬುದು ನಮ್ಮ ನಡುವಿನ ದುರಂತ.
ಇಲ್ಲಿ ಗೆಳೆತನ ಎಂಬ ವಿಶ್ವಾಸ, ಪ್ರೀತಿ ನಿಯತ್ತು ಹಣ ಕೊಡಿಸಿರುತ್ತದೆ. ಆದರೆ ಇಂತಹವನ ಗೆಳೆತನ ಯಾಕೆ ಮಾಡಿದೆನೋ ಎಂದು ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಕೋಡಂಗಿಯಾದ ಕೊಟ್ಟವನದಾಗಿರುತ್ತದೆ. ಇದು ನಿಜಕ್ಕೂ ದುರಂತದ ಸಂಗತಿ.
ಇನ್ನೂ ಕೊಟ್ಟವನ ಪರವಾಗಿ ಗೆಳೆಯರೇನಾದರೂ ಪಡೆದವರಿಂದ ಪಡೆದವನ ಬಳಿ ಅವನಿಗೆ ಕಷ್ಟ ಇದೆ ಹಾಗಾಗಿ ಕೊಡು ಎಂದು ಹೇಳಿದರೆ ಮತ್ತೆ ಈಗ ಅದೇ ನಾಟಕ. ಯಾವುದೇ ಕಾರಣಕ್ಕೂ ನಾನು ಕೊಡುವುದಿಲ್ಲ ಎಂದು ಸಲೀಸಾಗಿ ಪಡೆದವನಿಂದ ಬಂದ ಗಲೀಜನ್ನು ತಿಂದುಬಿಡುತ್ತಾನೆ ಎಂಬುದೇ ಈ ಜಗದ ಕೆಲವೇ ಕೆಲವು ವಿಕೃತ ಮನಸ್ಥಿತಿಯ ವ್ಯಕ್ತಿಗಳ ವರ್ತನೆ ಎಂದರೆ ತಪ್ಪಾಗಲಿಕ್ಕಿಲ್ಲ. ಪಡೆದವನಿಗೆ ಯಾರಾದರೂ ಹೀಗೆ ಮಾಡಿದರೆ ಏನಾಗುತ್ತೆ ಎಂಬ ಯೋಚನೆಯೇ ಬರೋದಿಲ್ಲ. ಜೈ ಚೌಡೇಶ್ವರಿ ನಮಃ.
