ಹುಡುಕಾಟದ ವರದಿ- 4
ಶಿವಮೊಗ್ಗ, ಪೆ.21:
ದೇವರ ಬಗ್ಗೆ ಆಧ್ಯಾತ್ಮಿಕದ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ತಮ್ಮ ಆಯುಕ್ತರ ಕಚೇರಿಯ ಹಲವರು ಹಾಗೂ ಮತ್ತೊಂದಿಷ್ಟು ಡಾಟಾ ಎಂಟ್ರಿಗಳ ಸಹಿತ ಸುಮಾರು ಏಳೆಂಟು ಜನ ಕಳೆದ ಭಾನುವಾರದಿಂದ ಪ್ರಯಾಗ್ ರಾಜ್ ನತ್ತ ಪ್ರವಾಸ ಕೈಗೊಂಡಿದ್ದಾರೆ.
ಅದು ಒಳ್ಳೆಯ ವಿಷಯವೇ ಹೌದು, ಆದರೆ ಪಾಲಿಕೆಯ ಬಹಳಷ್ಟು ಕೆಲಸಗಳನ್ನು ನೋಡಿಕೊಳ್ಳುವ ಜವಾಬ್ದಾರಿಗಳು ವಾರಗಟ್ಟಲೆ ರಜೆ ಹಾಕಿದಾಗ ಸಾರ್ವಜನಿಕರಿಗೆ ಗುತ್ತಿಗೆದಾರರಿಗೆ ಹಾಗೂ ಪಾಲಿಕೆ ಕೆಲಸ ಮಾಡುವ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ ತೊಂದರೆಯಾಗುತ್ತದೆ ಅಲ್ಲವೇ ಎಂಬುದು ಸಾರ್ವಜನಿಕ ಪ್ರಶ್ನೆ.


ಕಳೆದ ಭಾನುವಾರ ಸಂಜೆ ಭರ್ಜರಿ ಪ್ರವಾಸ ಆರಂಭಿಸಿದ ಪಾಲಿಕೆಯ ಜವಾಬ್ದಾರಸ್ಥರಾದ ಚುನಾಯಿತ ಪ್ರತಿನಿಧಿಗಳಿಲ್ಲದ ಈ ಸಂದರ್ಭದಲ್ಲಿ ಆಯುಕ್ತರು ಹೋಗಿದ್ದಾರೆ. ಇಡೀ ಜವಾಬ್ದಾರಿಯನ್ನು ವಾರದ ಮಟ್ಟಿಗಾದರೆ ಅಲ್ಲಿನ ಆಡಳಿತಾಧಿಕಾರಿಗಳಿಗೆ ವಹಿಸಬೇಕಿತ್ತು. ಆದರೆ ಅಲ್ಲಿನ ಆಡಳಿತ ಅಧಿಕಾರಿಗೆ ನಿತ್ಯದ ಅಗತ್ಯ ಸಲಹೆ ಸೂಚನೆಗೆ ಮಾತ್ರ ಅವಕಾಶ ನೀಡಿದ್ದು, ಯಾವುದೇ ಚೆಕ್ ನೀಡುವ ಮುಖ್ಯ ಆದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಂಜೂರಾತಿ ಕೊಡುವಂತಹ ಅವಕಾಶ ಕೊಟ್ಟಿಲ್ಲ. ಅದಕ್ಕೆ ಅಗತ್ಯವಿರುವ ಲಾಗಿನ್ ಹಾಗೂ ಪಾಸ್ವರ್ಡ್ ಅನ್ನು ಪಾಲಿಕೆಯ ಮತ್ತೋರ್ವ ಹಿರಿಯ ಅಧಿಕಾರಿಗೆ ನೀಡಬೇಕಾಗಿತ್ತಲ್ಲವೇ ಎಂಬುದು ಸಾರ್ವಜನಿಕರ ಹಾಗೂ ಪಾಲಿಕೆ ಆವರಣದಲ್ಲಿನ ಪ್ರಶ್ನೆ?

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂತಹ ಗುಸು-ಗುಸು ಮಾತುಗಳು ಹಾಗೂ ಹಿರಿಯ ಅಧಿಕಾರಿ ಎನ್ನುವ ಕಾರಣಕ್ಕೆ ಸುಮ್ಮನಿರುವ ನೌಕರರು ಜನರಿಗೆ ತೊಂದರೆ ಕೊಡುತ್ತಿರುವ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ಹಾಗೂ ನೌಕರರು ಬೇಸರಗೊಂಡಿದ್ದಾರೆ. ಆಯುಕ್ತರ ಇಬ್ಬರು ಆಪ್ತ ಸಹಾಯಕರು ಹಾಗೂ ಆಪ್ತ ಸಹಾಯಕಿ ಮತ್ತು ಆರ್ ಐ ಆಗಿರುವ ರಚನಾ ಅವರು ಮತ್ತು ಸೈಟ್ ಪ್ರದೀಪ್, ಒಂದಿಬ್ಬರು ಡಾಟಾ ಎಂಟ್ರಿ ಆಪರೇಟರ್ ಗಳ ಜೊತೆ ಉತ್ತರ ಭಾರತದ ಪ್ರವಾಸದಲ್ಲಿ ಮಗ್ನರಾಗಿರುವುದು ಅವರ ಸಂತೋಷಕ್ಕೆ ಎನ್ನುವುದು ಒಳ್ಳೆಯ ಕಾರ್ಯವೇ ಹೌದು. ಆದರೆ ಇದರಿಂದ ಜನರಿಗೆ ಆಗುವ ಸಮಸ್ಯೆಯನ್ನು ಗಮನಿಸಬೇಕಿತ್ತಲ್ಲವೇ? ಡಾಟಾ ಎಂಟ್ರೀ ಆಪರೇಟರ್ ಬಬ್ಬರು ಮಾತ್ರ ಈಗ ಕಛೇರಿಯ ಉಸ್ತುವಾರಿ ಮಾಲಿಕ..!
ಯಾರೀ ಡಬ್ಬಲ್ ಜವಾಬ್ದಾರಿಯ ಕೇಸ್ ವರ್ಕರ್..!
ಪಾಲಿಕೆಯ ಕೇಸ್ ವರ್ಕ್ ಆಗಿದ್ದ ಓರ್ವರಿಗೆ ಎರಡು ಜವಾಬ್ದಾರಿಗಳನ್ನು ಏಕೆ ನೀಡಿದ್ದಾರೋ ಗೊತ್ತಿಲ್ಲ. ಎರಡು ಜವಾಬ್ದಾರಿಗಳಲ್ಲಿ ಅದೆಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಆರ್ ಐ ಹಾಗೂ ಆಯುಕ್ತರ ಪಿಎ ಜವಾಬ್ದಾರಿಯನ್ನು ಅದೆಷ್ಟರ ಮಟ್ಟಿಗೆ ಈ ಮೇಡಂ ಮಾಡುತ್ತಿದ್ದಾರೋ. ಈ ಬಗ್ಗೆ ಪಾಲಿಕೆಯ ಆವರಣದಲ್ಲಿನ ಹಲವಾರು ಗುಸು-ಗುಸು-ಪಿಸು ಮಾತುಗಳು ಸದ್ದಿಲ್ಲದೆ ಸುದ್ದಿಯಾಗಲು ಹೊರಟಿವೆ.
ಹಿಂದೆ ಎಲೆಕ್ಷನ್ ಸೆಕ್ಷನ್ ನಲ್ಲಿದ್ದು ಅಲ್ಲಿಂದ ಆಯುಕ್ತರ ಪಿಎ ಆಗಿ ನಂತರ ಪಿಎಯಿಂದ ಜನನ ಮರಣ ವಿಭಾಗಕ್ಕೆ ಬಂದು ಈಗ ಆಯುಕ್ತರ ಪಿಎ ಜೊತೆ ಆಗಿ ಅವರ ಜೊತೆಗಿದ್ಕೊಂಡು ಆರ್ ಐ ಜವಾಬ್ದಾರಿಯನ್ನೂ ಗಿಟ್ಟಿಸಿಕೊಂಡಿದ್ದಾರೆಂಬುದು ಪಾಲಿಕೆಯಲ್ಲಿನ ಬಾರೀ ಚರ್ಚೆಯ ವಿಷಯವಾಗಿದೆ.