ಶಿವಮೊಗ್ಗ: ಮಲೆನಾಡು ಕೊರೊನಾಗೆ ನಿಜಕ್ಕೂ ತತ್ತರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿನ್ನೆ 23ಸೊಂಕು ತಗುಲಿದ ಬೆನ್ನಲ್ಲೇ 199ರ ಗಡಿಯಲ್ಲಿದ್ದ ಶಿವಮೊಗ್ಗದ ಪಾಲಿಗೆ ಇಂದು ಮತ್ತೆ ಕನಿಷ್ಟ 23ಜನರಿಗೆ ಸೊಂಕು ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿದೆ. ದುರಂತವೆಂದರೆ ನಿನ್ನೆ ಸಂಜೆ ಬಿಡುಗಡೆಯಾದ ಕೋವಿಡ್ 19ವರದಿಯಂತೆ ಇಂದೂ ಸಹ 23 ಜನರಿಗೆ ಸೊಂಕು ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಹೊರಬಿದ್ದಿರುವ 23ಸೇರಿ ಜಿಲ್ಲೆಯಲ್ಲಿ ಒಟ್ಟು 199 ಜನರಿಗೆ ಸೊಂಕು ಕಾಣಿಸಿಕೊಂಡಿತ್ತು. ಹೊಸ ಸೇರ್ಪಡೆ ಸೇರಿದರೆ ದ್ವಿಶತಕ ದಾಟಿದ ಅಂಕೆ ತಲುಪುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.
ಈಗ 109 ಜನ ಬಿಡುಗಡೆಯಾಗಿದ್ದಾರೆ. 65 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀರಾ ಭಯ ಹುಟ್ಟಿಸಿರುವ ಶಿವಮೊಗ್ಗ ನಗರದ
ಸ್ವಾಮಿ ವಿವೇಕಾನಂದ ಬಡಾವಣೆ, ಕುಂಬಾರಗುಂಡಿ, ತುಂಗಾನಗರ ಸೀಲ್ಡೌನ್ ಆದ ನಂತರ ಈಗ ರಾಜೇಂದ್ರ ನಗರ,ವಿನೋಬನಗರ, ಶಿವಪ್ಪನಾಯ್ಕ ಬಡಾವಣೆ, ಜಿಎಸ್ ಕೆಎಂ ರಸ್ತೆ, ರವಿವರ್ಮ ಬೀದಿ, ಪೆಕ್ಷನ್ ಮೊಹಲ್ಲಾ, ಬೇಡರಹೊಸಳ್ಳಿ ಸೇರಿದಂತೆ
ಭದ್ರಾವತಿ ಕಾಗದನಗರ, ಹಳೇನಗರ,ಶಿರಾಳಕೊಪ್ಪ, ತೀರ್ಥಹಳ್ಳಿ, ಶಿಕಾರಿಪುರದ ಹಲವು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಿನ್ನೆ ಶಿವಮೊಗ್ಗ ಸೊಂಕಿತರ ಸಂಖ್ಯೆ 199ಆಗಿದ್ದರೆ, ಈಗಾಗಲೇ 117ಜನ ಗುಣಮುಖರಾಗಿದ್ದಾರೆ. ಚನ್ನಗಿರಿ ಮೂಲದ ಮಹಿಳೆ ಹಾಗೂ ಶಿಕಾರಿಪುರ ಮೂಲದ ಮಹಿಳೆ ಸೇರಿ ಇಬ್ಬರು ಸಾವು ಕಂಡಿದ್ದಾರೆ. ಕಡೂರು ಮೂಲದ ಶಿಕ್ಷರರ ಸಾವು ಹಾಗೂ ಶಿವಮೊಗ್ಗ ಮೂಲದ ಮತ್ತೋರ್ವರ ಸಾವು ಇಂದು ಸಂಜೆ ಘೋಷಣೆಯಾಗಲಿದೆ ಎನ್ನಲಾಗಿದೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ.
ಅನುಮಾನದ ಹುತ್ತದಲ್ಲಿ
ಈಗಿನ 23 ಪ್ರಕರಣಗಳ ಅನುಮಾನ ವಿದೇಶ, ಅಂತರರಾಜ್ಯ, ರಾಜದಾನಿ ಹಾಗೂ ಕೊರೊನಾ ಸೊಂಕಿತರಿಂದ ಬಂದಿವೆ ಎನ್ನಲಾಗಿದೆ. ಕವಾಸಪುರ ಅಂತ್ಯ ಸಂಸ್ಕಾರ, ಅರಬಿಳಚಿ, ಬೇಡರಹೊಸಳ್ಳಿ, ಸ್ವಾಮಿ ವಿವೇಕಾನಂದ ಬಡಾವಣೆ, ಭದ್ರಾವತಿ ಸೇರಿಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಇದು ಕಾಣಿಸಿಕೊಂಡಿದೆ ಎನ್ನಲಾಗಿದೆ