ಶಿವಮೊಗ್ಗ,ಫೆ.04: ಬೇರೆ ಬೇರೆ ಜಾತಿ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಕೆಲಸವಾಗುತ್ತಿದ್ದು, ಸಾಧು-ಸಂತರ ಮಠಗಳ ಅಭಿವೃದ್ಧಿ ಹಿಂದೂ ಧರ್ಮದ ಉದ್ಧಾರ ಮತ್ತು ಹಿಂದುತ್ವ ಉಳಿಸುವುದೇ ಕ್ರಾಂತಿವೀರ ಬ್ರೀಗೇಡ್ನ ಉದ್ದೇಶ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬ್ರೀಗೇಡ್ನ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಬಸವನ ಬಾಗೇವಾಡಿಯಲ್ಲಿ 1008 ಸಾಧು-ಸಂತರ ಪಾದ ಪೂಜೆಯೊಂದಿಗೆ ಕ್ರಾಂತಿವೀರ ರಾಯಣ್ಣ ಬ್ರೀಗೇಡ್ ಉದ್ಘಾಟಿಸಿ ಮಾತನಾಡಿದರು.
ದೀನ ದಲಿತ ಹಿಂದುಳಿದ ಎಲ್ಲಾ ವರ್ಗದವರು ಸಮಾನರು ಎಂದು ತಿಳಿಸಿದ ಜಗಜ್ಯೋತಿ ಬಸವಣ್ಣ ಹುಟ್ಟಿದ ನಾಡಿದು, ಅಲ್ಲಿಂದಲೇ ಈ ಬ್ರೀಗೇಡ್ನ್ನು ಹುಟ್ಟುಹಾಕಿ ಗೋ ಸಂತತಿ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಸಾಧು-ಸಂತರೇ ಒಟ್ಟಾಗಿ ಮಾಡುತ್ತಿರುವ ಕಾರ್ಯವಿದು. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.
ನಾವು ಇಂದಿನಿಂದಲೇ ನಮ್ಮ ಹೃದಯದಲ್ಲಿ ದೇಶ ಮತ್ತು ಧರ್ಮ ಉಳಿಸುವ ಮತ್ತು ಅದಕ್ಕಾಗಿ ತ್ಯಾಗ ಮಾಡುವ ಸಿದ್ದಾಂತವನ್ನು ರೂಢಿಸಿಕೊಳ್ಳಬೇಕು. ಇವತ್ತಿನಿಂದ ಮುಂದೇ ಜೀವನದಲ್ಲಿ ಯಾವುದೇ ಜಾತಿ ಮಾಡಲ್ಲ ಜಾತ್ಯಾತೀತ ವ್ಯಕ್ತಿಯಾಗಿ ಈ ದೇಶದ ಸಂಸ್ಕøತಿ ಮತ್ತು ಧರ್ಮವನ್ನು ರಕ್ಷಿಸುತ್ತೇನೆ ಎಂಬ ಪ್ರತಿಜ್ಞೆ ಮಾಡೋಣ ಎಂದರು.
ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ. ಗರ್ಭಧರಿಸಿದ ಹಸುವಿನ ಚಿತ್ರವನ್ನು ವಾಟ್ಸಾಪ್ನಲ್ಲಿ ಪ್ರಕಟಿಸಿ ಅಂತಹ ಹಸುವನ್ನು ಕಡಿದು ಮಾರಾಟ ಮಾಡುವ ಜಾಲ ವ್ಯಾಪಾಕವಾಗಿದೆ. ಕಣ್ಣೆದುರೇ ಕೆಚ್ಚಲು ಮತ್ತು ಬಾಲವನ್ನು ಕಡಿಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ದುಃಖ ತಂದಿದೆ. ಸತ್ತು ಸ್ವರ್ಗ ಸೇರಿದ ಹೋರಾಟಗಾರರು ಇದಕ್ಕಾಗಿ ನಾವು ಸ್ವಾತಂತ್ರ್ಯ ಪಡೆಯಬೇಕಿತ್ತ ಎಂದು ದುಃಖಿಸುತ್ತಿದ್ದಾರೆ ಎಂದರು.
ನಮ್ಮ ಸರ್ಕಾರವಿದ್ದಾಗ ನೂರಾರು ಕೋಟಿಗಳನ್ನು ಮಠಗಳ ಅಭಿವೃದ್ಧಿಗೆ ಕೊಟ್ಟಿದ್ದೆವು. ಇವತ್ತು 1008 ಸ್ವಾಮೀಜಿಗಳು ಇಲ್ಲಿ ಬಂದಿದ್ದಾರೆ. ಕೆಲವರು ಗುಡಿಸಿಲಿನಲ್ಲಿದ್ದು ಧರ್ಮ ಸಂಘಟನೆ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಕಣ್ಣೀರು ಬರುತ್ತದೆ. ಹಲವು ಪೀಳಿಗೆಗಳಿಂದ ಒಕ್ಕಲುತನ ಮಾಡಿಕೊಂಡು ಬಂದಿದ್ದ ರೈತರ ಜಮೀನುಗಳು ವಕ್ಫ್ ಆಸ್ತಿಯಾಗಿದೆ. ಇನ್ನು ಮುಂದೆ ಇದಕ್ಕೆಲ್ಲ ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ಬ್ರೀಗೇಡ್ ರಚನೆಯಾಗಿದೆ ಎಂದರು.
ತಿಂಥಿಣಿ ಮಠದ ಸಿದ್ದರಾಮಾನಂದ ಮಹಾಸ್ವಾಮೀಗಳು ಮಾತನಾಡಿ, ಕ್ರಾಂತಿವೀರ ಬ್ರೀಗೇಡ್ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಇದು ಸಾಧುಸಂತರ ಕಾರ್ಯಕ್ರಮ ನಮ್ಮ ನಾಡಿನ ಸಂಸ್ಕøತಿ ಉಳಿಸುವ ಕಾರ್ಯಕ್ರಮ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕಾರ್ಯಕ್ರಮ ಅಂದಿನ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನಿಗೆ ಬೆಂಗಾವಾಲಿಗೆ ನಿಂತ ರಾಯಣ್ಣನಿಗೆ ಅಂದು ಜನಸಾಮಾನ್ಯರು ಬೆಂಬಲ ನೀಡಿದರು. ಹಾಗೆಯೇ ಇಂದು ಈ ಬ್ರೀಗೇಡ್ಗೆ ನಾಡಿನ ಸಮಸ್ತ ಸಾಮಾನ್ಯ ಜನತೆ ಬೆಂಬಲ ನೀಡಲಿದ್ದಾರೆ. ಇದು ಹಿಂದೂಸ್ತಾನ. ಇಲ್ಲಿ ಇಸ್ಲಾಂತೇತರರು ಕಾಫೀರರು ಎಂಬ ಭಾವನೆ ಸರಿಯಲ್ಲ. ಜಗತ್ತಿನಲ್ಲಿ ವರ್ಣಬೇಧ ತೊಲಗಬೇಕು. ಜಾತಿಯತೆ ನಾಶ ಮಾಡುವ ವ್ಯವಸ್ಥೆಯಾಗಬೇಕು. ನಮ್ಮ ದೇಶ ಆದಿವಾಸಿಗಳ ಸಂಸ್ಕøತಿಯ ದೇಶ. ಇಲ್ಲಿ ಸಮಾನತೆಯನ್ನು ಸಾರುವ ಧಾರ್ಮಿಕ ವ್ಯವಸ್ಥೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಉತ್ತರಕರ್ನಾಟಕ ಭಾಗದ 1008ಕ್ಕಿಂತಲೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ಬ್ರೀಗೇಡ್ನ ಪ್ರಮುಖರು ಉಪಸ್ಥಿತರಿದ್ದರು