ಶಿವಮೊಗ್ಗ : ಅಡಿಕೆಗೆ ಕ್ಯಾನ್ಸರ್ಕಾರಕ ಎಂದು ಹಣೆಪಟ್ಟಿ ಕಟ್ಟಿದ್ದು ಬಿಜೆಪಿ ನೇತೃತ್ವ ಕೇಂದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ರಮೇಶ್ ಹೆಗಡೆ ಆರೋಪಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡಿಕೆ ಹಾನಿಕಾರಕ ಎಂದು ಅಫಿಡೆವಿಟ್ ಹಾಕಿರೋದು ಯಾರು ಎಂಬುದನ್ನು ಮಧು ಬಂಗಾರಪ್ಪ ಸ್ಪಷ್ಟಪಡಿಸಲಿ ಎಂದು ಹೇಳಿರುವ ಹೇಳಿಕೆ ಸರಿಯಲ್ಲ. ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ ಅಡಿಕೆ ಕ್ಯಾನ್ಸರ್ ಕಾರಕವೆಂದು ಅಫಿಡವಿಟ್ ಸಲ್ಲಿಸಿದೆ ಎಂದು ಆರಗ ಜ್ಞಾನೇಂದ್ರರವರ ಹೇಳಿಕೆ ಸುಳ್ಳು ಆರಗ ಜ್ಞಾನೇಂದ್ರ ಅರೆಬರೆ ಹೇಳಿಕೆ ಕೊಡುತ್ತಾರೆ. ಅವರು ಮ್ಯಾಮ್ ಕೋಸ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಡಿಕೆ ಕುರಿತು ಕಾಂಗ್ರೇಸ್ ವಿರುದ್ದು ಸುಳ್ಳು ಹೇಳಿಕೆ ನೀಡುವುದರ ಮೂಲಕ ಅಡಿಕೆ ಬೆಳೆಗಾರರ ಮನ ಒಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಅಡಿಕೆ ಬೆಳೆಗಾರರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡುತ್ತಿರುವುದು ಖಂಡನೀಯ. ಅಡಿಕೆಯ ಮಾನ ಹಾಗೂ ಮೌಲ್ಯವನ್ನು ತೆಗೆದ ಬಿಜೆಪಿ ಅಡಿಕೆ ಬೆಳೆಗಾರರ ಕ್ಷಮೆಯಾಚಿಸಲು ಕಾಂಗ್ರೇಸ್ ಪಕ್ಷ ಒತ್ತಾಯಿಸುತ್ತದೆ ಎಂದರು.
ಭಾರತೀಯ ಹಿಂದು ಧಾರ್ಮಿಕ ಹಾಗೂ ಸಾಂಸ್ಕøತಿಕ ಬದುಕಿನಲ್ಲಿ ಪೂಜ್ಯ ಭಾವನೆಯನ್ನು ಹೊಂದಿರುವ, ಔಷಧಿ ಗುಣವುಳ್ಳ ಹಾಗೂ ಲಕ್ಷಾಂತರ ರೈತರ ಬದುಕಿನ ಬೆಳೆಯಾದ ಅಡಿಕೆಗೆ ಕ್ಯಾನ್ಸರ್ ಕಾರಕವೆಂದು ಹಣೆಪಟ್ಟಿ ಕಟ್ಟಿ. ಕಳ್ಳ ಸಾಗಾಣಿಕೆ ಹಾಗೂ ಅಡಿಕೆ ಅಕ್ರಮ ಆಮದಿಗೆ ಸಹಾಯ ಮಾಡಿ ಅಡಿಕೆಯ ಮಾನ ಮತ್ತು ಮೌಲ್ಯವನ್ನು ತೆಗೆದಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಆಗ್ರಹಿಸಿದರು.
2001 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರದಲ್ಲಿ ಕ್ಯಾಂಕೋ ಅಧ್ಯಕ್ಷರಾದ ಎಸ್.ಆರ್.ರಂಗಮೂರ್ತಿ, ಪಿ.ರಾಮ್ ಭಟ್ ಇನ್ನಿತರ ಬಿಜೆಪಿ ಮುಖಂಡರೊಳಗೊಂಡ ತಜ್ಞರ ಸಮಿತಿ ಅಡಿಕೆ ಕ್ಯಾನ್ಸರ್ ಕಾರಕವೆಂದು ವರದಿ ನೀಡಿರುತ್ತದೆ. 2017 ಹಾಗೂ 2019 ರಲ್ಲಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆರೋಗ್ಯ ಸಚಿವೆ ಅನುಪ್ರಿಯ ಪಟೇಲ್ ಹಾಗೂ ಅಶ್ವಿನ್ ಕುಮಾರ್ ಚೌಬೆ ಅಡಿಕೆ ಕ್ಯಾನ್ಸರ್ಕಾರವೆಂದು ಸಂಸತ್ ಅಧಿವೇಷನದಲ್ಲಿ ಲಿಖಿತ ಹೇಳಿಕೆ ನೀಡಿರುತ್ತಾರೆ. ಅಲ್ಲದೆ, 2021 ರಲ್ಲಿ ಜಾರ್ಖಂಡ್ ಬಿಜೆಪಿ ಎಂ.ಪಿ ನಿಶಿಕಾಂತ್ ದುಬೆ ಅಡಿಕೆ ನಿμÉೀಧಿಸುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿರುತ್ತಾರೆ. 2022 ರಲ್ಲಿ ಮೋದಿ ಸರ್ಕಾರದ ಕೇಂದ್ರ ಆರೋಗ್ಯ ಸಚಿವರ ಮಾನ್ಸ್ಸುಖ್ ಮಾಂಡವೀಯ ಅಡಿಕೆಯ ಮಾನವ ಬಳಿಕೆ ನಿμÉೀಧಿಸುವ ಬಗ್ಗೆ ಹೇಳಿಕೆ ನೀಡಿರುತ್ತಾರೆ. ಹೇಳಿಕೆ ನೀಡುವುದರ ಮೂಲಕ ಅಡಿಕೆಯ ಮಾನ ಹರಾಜು ಹಾಕಿರುತ್ತಾರೆ. 2021 ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಅಡಿಕೆಯನ್ನು ‘ಕೃಷಿ ಮಾರಾಟ ವಾಹಿನಿ ವೆಬ್ಸೈಟ್’ನಲ್ಲಿ ‘ಮಾದಕ ಉತ್ತೇಜಕ’ ಪಟ್ಟಿಗೆ ಸೇರಿಸಿ ಅಡಿಕೆ ಮಾನ ಕಳೆದಿರುತ್ತಾರೆ ಎಂದು ಆರೋಪಿಸಿದರು.
ಸಾರ್ಕ್, ಐಎಸ್ಎಫ್ಟಿಎ ಮತ್ತು ಎಸ್ಎಎಫ್ಟಿಎ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಂಡು ಇಂಡೋನೇಷಿಯ ದೇಶದಿಂದ ಶ್ರೀಲಂಕ ಮೂಲಕ ಅಡಿಕೆ ಮರುರಫ್ತುಗೆ ಅವಕಾಶ ಮಾಡಿಕೊಟ್ಟಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಭಾರತ ದೇಶದ ಅಡಿಕೆಗೆ ಕಡಿಮೆ ಬೆಲೆ ಸಿಗಲು ನರೇಂದ್ರ ಮೋದಿ ಸರ್ಕಾರ ಕಾರಣವಾಗಿದೆ ಎಂದ ಅವರು, ಅಡಿಕೆ ಕಳ್ಳ ಸಾಗಾಣಿಕೆ ಹಾಗೂ ಮರು ರಫ್ತು ಕಾರಣದಿಂದ ವಿದೇಶಿ ಅಮದು ಅಡಿಕೆಯ ಕನಿಷ್ಠ ಖರೀದಿ ದರ ರೂ.351 ಗಳು ಪ್ರತಿ ಕೆಜಿಗೆ ಹೆಚ್ಚಿಸಿದರೂ ಸಹ ನಮ್ಮ ದೇಶದ ರೈತರ ಉತ್ತಮ ಗುಣಮಟ್ಟದ ಅಡಿಕೆಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ ಎಂದರು.
ದೇಶಿಯ ಮಾರುಕಟ್ಟೆಯಲ್ಲಿ ಸಾವಿರಾರು ಟನ್ ಅಡಿಕೆ ದಾಸ್ತಾನಿದ್ದರೂ ಸಹ ಭೂತಾನ್ ದೇಶದಿಂದ 17000 ಮೆಟ್ರಿಕ್ ಟನ್ ಅಡಿಕೆ ಅಮದು ಮಾಡಿದ್ದು, ಗುಟ್ಕಾ ಕಂಪನಿಯ ಮಾಲೀಕರ ಅನುಕೂಲಕ್ಕಲ್ಲವೇ? ಕೇಂದ್ರ ಬಜೆಟ್ನಲ್ಲಿ ಬಿಹಾರದ ಮಖನಾ ಬೆಳೆಗೆ ಮಂಡಳಿ ರಚನೆಗೆ ಅವಕಾಶ ಕಲ್ಪಿಸಿ ಅಂತರಾಷ್ಟ್ರೀಯ ಬೆಳೆಯಾದ ಅಡಿಕೆ ಮಂಡಳಿ ರಚನೆಗೆ ವಿರೋಧ ಏಕೆ? ಇದು ಅಡಿಕೆ ಬೆಳೆಗಾರರಿಗೆ ಎಸಗಿದ ದ್ರೋಹ ಅಲ್ಲವೇ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾμÁ, ವಿಜಯ್ ಕುಮಾರ್, ಜಿ.ಡಿ.ಮಂಜುನಾಥ್, ನಿರಂಜನ್, ಧೀರರಾಜ್ ಹೊನ್ನವಿಲೇ ಉಪತಿತರಿದ್ದರು.