ಹೊಸನಗರ: ಇಂದಿನಿಂದ ಫೆಬ್ರವರಿ 12ರ ವರೆಗೆ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಅದ್ದೂರಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಜಾತ್ರೆ ಸಮಿತಿ ಸಂಚಾಲಕ ಟಿ.ಆರ್. ಸುನೀಲ್ ಕುಮಾರ್ ತಿಳಿಸಿದರು.
ಪತ್ರಕರ್ತರೊಂದಿಗೆ ಅವರು ಮಾತನಾಡಿ, ಫೆ 4ರ ಮಂಗಳವಾರ ದಿಂದ ಫೆ 12ರ ಬುಧವಾರ ವರಗೆ 9 ದಿನಗಳ ಕಾಲ ನೆಡಯಲಿರುವ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ರಾತ್ರಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು,
ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುವಂತೆ ಅವರು ಕೋರಿದ್ದಾರೆ.