ಶಿವಮೊಗ್ಗ ಜ.17 :: ಕಾಂಗ್ರೆಸ್ ಭಿನ್ನಮತ ಮುಚ್ಚಿ ಹಾಕಲು ತಮ್ಮ ಅಧಿಕಾರವನ್ನು ಸುಭದ್ರಗೊಳಿಸಲು ಕಾಂಗ್ರೆಸ್ ಸರ್ಕಾರ ತುಷ್ಠೀಕರಣದ ನೀತಿ ಅನುಸರಿಸುವ ಭಾಗವಾಗಿ ಇದೊಂದು ಷಡ್ಯಂತ್ರ ಅಷ್ಟೇ. ನಿನ್ನೆ ಕೂಡ ಹಿಂದೂಗಳ ಪವಿತ್ರ ಸ್ಥಳವಾದ ನಂಜನಗೂಡಿನಲ್ಲಿ ದೇವರಿಗೆ ಬಿಟ್ಟ ಹಸುವಿನ ಬಾಲವನ್ನು ತುಂಡರಿಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಹಿಂದೂ, ಮುಸ್ಲಿಮರಲ್ಲಿ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಹಿಂದೆ ಕಾಂಗ್ರೆಸ್ ಚಿಹ್ನ ಹಸು ಮತ್ತು ಕರು ಆಗಿತ್ತು. ಯಾವಾಗ ಇವರು ಹಸುವಿನ ಹಾಲು ಕುಡಿದು ವಿಷ ಕೊಡುತ್ತಾರೆ ಎಂದು ಗೊತ್ತಾಯತೋ ಚುನಾವಣಾ ಆಯೋಗವೇ ಕಾಂಗ್ರೆಸ್ ನಿಂದ ಈ ಚಿಹ್ನೆ ಕಿತ್ತುಕೊಂಡಿದೆ ಎಂದರು.
ಕಾಂಗ್ರೆಸ್ ನಡೆಗೂ ನುಡಿಗೂ ಸಂಬಂಧವಿಲ್ಲ. ಹಿಂದೂಗಳು ಬಳೆ ತೊಟ್ಟುಕೊಂಡು ಕುಳಿತಿಲ್ಲ. ಎಚ್ಚರವಿರಲಿ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸಹನೆ ನಮ್ಮ ದೌರ್ಬಲ್ಯವಲ್ಲ, ರಾಜ್ಯದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಬಾಳಬೇಕಾದರೆ ಗೋಹತ್ಯೆ ನಿಲ್ಲಿಸಬೇಕು. ಹಿಂದೂಗಳು ತೀರ್ಮಾನ ಮಾಡಿದರೆ ನೀವು ತಡೆದುಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ನೀತಿ ಅವರಿಗೇ ರಕ್ಷಣೆಯಾಗಿದೆ. ನಾವು ೨೫ಕ್ಕೂ ಹೆಚ್ಚು ಗೋಹತ್ಯೆ ಪ್ರಕರಣಗಳನ್ನು ಹಿಡಿದುಕೊಟ್ಟರೂ ಇದುವರೆಗೂ ಯಾವುದೇ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಹಾಗಾದರೇ ಶಿವಮೊಗ್ಗದಲ್ಲಿ ಗೋಹತ್ಯೆ ನಿಷೇಧ ಕಾನೂನು ಇಲ್ಲವೇ ಎಂದು ಪ್ರಶ್ನಿಸಿದರು.
ಬಜರಂಗದಳದ ಮುಖಂಡ ರಾಜೇಶ್ ಗೌಡ ಮಾತನಾಡಿ, ಹಿಂದೂಗಳು ಒಟ್ಟಾದರೆ ನೀವೆಲ್ಲ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ. ಗೋವಿನ ಕೆಚ್ಚಲು ಕುಯ್ಯಲು ಪ್ರಮುಖ ಕಾರಣ ಪಶು ಆಸ್ಪತ್ರೆಯ ಜಾಗವನ್ನು ಉಳಿಸಿಕೊಳ್ಳಲು ಕರ್ಣ ಎಂಬುವವರು ಗೋವಿನೊಂದಿಗೆ ಪ್ರತಿಭಟನೆ ಮಾಡಿ ದರ್ಗಾ ಮಾಡಲು ಹೊರಟ ಪಶು ಆಸ್ಪತ್ರೆ ಜಾಗವನ್ನು ಉಳಿಸಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಅವರ ಮನೆಯ ಹಸುಗಳ ಮೇಲೆ ಕ್ರೂರತ್ವ ಮೆರೆದಿದ್ದಾರೆ ಎಂದರು.
ಪೊಲೀಸರು ಬಂಧಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಅಲ್ಲ, ಆತ ಅಲ್ಲೇ ಬೇಕರಿಯೊಂದರಲ್ಲಿ ೭ ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಸಚಿವ ಜಮೀರ್ ಅಹಮ್ಮದ್ ಸಲಹೆ ಮೇರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ಕಾಣುತ್ತಿದೆ. ಪೊಲೀಸರು ಸುಳ್ಳು ಕೇಸ್ ದಾಖಲಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದರು.