ಶಿವಮೊಗ್ಗ ಜ.17: ನಡೆದಾಡುವ ಅಯ್ಯಪ್ಪ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿ ರವರ ಹಿರಿಯ ಪುತ್ರರಾದ ಶ್ರೀ ಶಬರೀಶ್ ಸ್ವಾಮಿಯವರ 47ನೇ ಶಬರಿಮಲೆ ಯಾತ್ರೆ ಇಂದು ಆರಂಭಗೊಂಡಿತು. ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿದ ಈ ಯಾತ್ರೆಯಲ್ಲಿ ಹಲವಾರು ಅಯ್ಯಪ್ಪ ಸ್ವಾಮಿ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಶ್ರೀ ರೋಜಾ ಗುರೂಜಿ ಅವರ ವಿಶೇಷ ಪಂಚಲೋಹದ ಗುರು ಬೆತ್ತ, ಗುರುಗಳು ಯಾತ್ರೆಗೆ ಕೊಂಡೊಯ್ಯುತ್ತಿದ್ದ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹ ಹಾಗೂ ಶಿಷ್ಯ ವೃಂದದಿಂದ ಯಾತ್ರೆಗಾಗಿ ತಂದ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಣಿಕಂಠ ಸೇರಿದಂತೆ ಎಲ್ಲಾ ಮಾಲಾಧಾರಿಗಳ ತುಪ್ಪದ ಕಾಯಿ ಹಾಗೂ ಇರುಮುಡಿ ಕಟ್ಟನ್ನು ಕಟ್ಟಲಾಯಿತು. ಸತತವಾಗಿ ಸುಮಾರು ಒಂದು ಗಂಟೆಗು ಮೇಲಾಗಿ ಶರಣು ಘೋಷ ಮಾಡಲಾಯಿತು. ಇದೇ
ಸಂದರ್ಭದಲ್ಲಿ ಗರುಡನ ದರ್ಶನವು ಸ್ಥಳವನ್ನು ಭಕ್ತಿಯುತವಾಗಿ ಮಾಡಿತು. ಗರುಡನ ದರ್ಶನ ಪಡೆದ ಭಕ್ತಾದಿಗಳು ಇನ್ನೂ ಹೆಚ್ಚಾಗಿ ಶರಣು ಘೋಷ ಮಾಡಿ ದೇವರಿಗೆ ತಮ್ಮ ನಮನವನ್ನು ಸಲ್ಲಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ರೋಜಾ ಗುರೂಜಿ ರವರ ಆಶೀರ್ವಾದ ಅಲ್ಲಿ ನೆರೆದಿದ್ದ ಮಾಲಾಧಾರಿಗಳು ಹಾಗೂ ಭಕ್ತದಿಗಳಿಗೆ ದೊರಕಿತು. ಈ ಯಾತ್ರೆಯಲ್ಲಿ ಶ್ರೀ ಶಬರೀಶ್ ಸ್ವಾಮಿಯೊಂದಿಗೆ ವೆಂಕಟೇಶ್, ಪಳನಿ,
ವಿಶ್ವನಾಥ್, ಸುರೇಶ್, ಮಂಜುನಾಥ್, ಪ್ರೇಮ್, ಉದಯ್, ಧನುಷ್, ನಿಖಿತ್, ಅಣ್ಣಪ್ಪ, ಮುರುಗೇಶ್, ಧನುಷ್ ಶಬರಿಮಲೆ ಯಾತ್ರೆಯಲ್ಲಿ ತೊಡಗಿದ್ದಾರೆ. ಈ ಭಕ್ತಿಪೂರ್ವಕ ಸಂಧರ್ಭದಲ್ಲಿ ಮುರಳಿ, ಕೇಶವ್, ಮಳೆಬೆನ್ನೂರ್ ಮಂಜು ಸ್ವಾಮಿ, ಶರತ್, ಅಡಿಕೆ ಮಂಡಿ ವೆಂಕಟೇಶ್,
ಯಾರಗನಾಳ್ ಕಾಶಿನಾಥ್, ಲಕ್ಷ್ಮಿ, ಶಶಿಕಲಾ, ಸುಮತಿ, ಸೆಲ್ವಿ, ಮುರುಗ, ಗೀತಾ, ದೀಪ, ಕವಿತ, ಶ್ರೀನಿವಾಸ್, ಕೀರ್ತನ, ದುರ್ಗಾ ಪ್ರಸಾದ್, ಚಂದ್ರಕಲಾ, ರೇಣುಕಮ್ಮ, ತೇಜಸ್ವಿನಿ, ನಿಖಿಲ್, ಹಸೂಡಿ ಫಾರ್ಮ್ ಮುರಳಿ, ಕಿರಣ್ ಮತ್ತು ಇತರರು ಉಪಸ್ಥಿತರಿದ್ದರು. ಶ್ರೀ ಶಬರೀಶ್ ಸ್ವಾಮಿಯವರು ನೆರೆದಿದ್ದ ಅಯ್ಯಪ್ಪ ಭಕ್ತದಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳೊಂದಿಗೆ ಹಿತವಚನ ನೀಡಿ ಶಿವಮೊಗ್ಗದ ಜನತೆಯ ಒಳಿತಿಗಾಗಿ ಶಬರಿಮಲೆ ಅಯ್ಯಪ್ಪನಲ್ಲಿ ಬೇಡುವುದಾಗಿ ತಿಳಿಸಿದರು. ಎಲ್ಲಾ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.