ಶಿವಮೊಗ್ಗ ಜ.13 :: ಬೆಂಗಳೂರಿನ ಚಾಮರಾಜಪೇಟೆ ವಿನಾಯಕ ನಗರದ ಹಳೇ ಪೆನ್ಷನ್ ಮೊಹಲ್ಲಾದ ರಸ್ತೆಯ ಬದಿ ಶೆಡ್ ನಲ್ಲಿ
ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ಮಚ್ಚಿನಿಂದ ಕಾಲಿಗೆ ಹೊಡೆದಿರುವುದು ರಾಕ್ಷಸೀಯ, ಅಮಾನವೀಯ ಮತ್ತು
ಹೇಯ ಕೃತ್ಯವಾಗಿದೆ. ಈ ರೀತಿ ಗೋವುಗಳಿಗೆ ಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ.
ಘಟನೆ ನಡೆದ ದಿನವಿಡೀ ಮೂಕಪ್ರಾಣಿಗಳು ವೇದನೆಯಿಂದ ನರಳಿದ್ದು, ಮಾವನೀಯತೆ ಇಲ್ಲದ ಕ್ರೂರಿಗಳು ಈ ರೀತಿಯ
ನೀಚ ಕೃತ್ಯ ಎಸಗಿದವರನ್ನು, ಪತ್ತೆ ಹಚ್ಚಿ ಅವರಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕು. ಕೆಲವು ನಗರಗಳಲ್ಲಿ ಮಾದಕ
ವ್ಯಸನಿಗಳು ಮತ್ತು ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಸಮಾಜದಲ್ಲಿ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿರುವ
ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಎಂದು ಸಂಸದರಾದ ಬಿ.ವೈ. ರಾಘವೇಂದ್ರ ರವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.