ಶಿವಮೊಗ್ಗ, ಜ.09:
ಜ.10 ರಂದು ಶಿವಮೊಗ್ಗ ಹೊಸಮನೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ವೈಭವದ ಹಾಗೂ ಭಕ್ತಿ ಪ್ರಧಾನವಾದ ವೈಕುಂಟ ಏಕಾದಶಿ ಪೂಜಾ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 9 ರಿಂದ 12.30 ರವರೆಗೆ ಪೂಜಾ ವಿಧಾನಗಳು ನಡೆಯಲಿದ್ದು, ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ.
ಸಂಜೆ ಆರರಿಂದ ಸಪ್ತಗಿರಿ ಟ್ರಸ್ಟ್ ಕಲಾವಿದರಿಂದ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಗಳ ಕೃಪೆಗೆ ಪಾತ್ರರಾಗಲು ಸೇವಾ ಸಮಿತಿ ಪರವಾಗಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಮೂರ್ತಿ (7829378158) ಕೋರಿದ್ದಾರೆ.