ಶಿವಮೊಗ್ಗ ಜ.09: ಇ ಸ್ವತ್ತಿಗಾಗಿ ಪ್ರತಿನಿತ್ಯ ಸಾವಿರಾರು ಜನರು ಮಹಾನಗರ ಪಾಲಿಕೆಗೆ ಅಲೆದಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇದಕ್ಕೆ ಪರಿಹಾರವೇ ಸಿಗದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಶಿವಮೊಗ್ಗದ ಶಾಸಕರು ಮತ್ತು ಮಹಾನಗರ ಪಾಲಿಕೆಯ ಆಯುಕ್ತರು ಹೊಸದಾಗಿ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಕಳೆದ ಎರಡು ತಿಂಗಳಿನಿಂದ ಹೇಳುತ್ತಲೇ ಬರುತ್ತಿದ್ದಾರೆ. ಹೇಳಿಕೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಸಮರೋಪಾದಿಯಲ್ಲಿ ಕೆಲಸ ಮಾಡಿ ಸೇವೆ ಪ್ರಾರಂಭಿಸಬೇಕು.
ಕಳೆದ ಎರಡು ತಿಂಗಳಿನಿಂದ ಇ ಸ್ವತ್ತಿಗೆ ಅರ್ಜಿ ಹಾಕಿ ಕೊಂಡು ಅಲೆದಾಡುತ್ತಿರುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಕೇಳಿದಷ್ಟು ಹಣ ನೀಡಿ ಎರಡು ಮೂರು ದಿವಸಗಳಲ್ಲೇ ಈ ಸ್ವತ್ತು ದಾಖಲೆ ಪಡೆಯುತ್ತಿರುವ ದೊಡ್ಡ ವರ್ಗವೇ ಇದೆ.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಇದೆಲ್ಲವೂ ಸರ್ವೇಸಾಮಾನ್ಯವಾಗಿದೆ.
ಇನ್ನೊಂದು ವಾರದ ಒಳಗೆ ಶಿವಮೊಗ್ಗದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮೂರು ಕೌಂಟರ್ ಗಳನ್ನು ತೆರೆದು ಸಾರ್ವಜನಿಕರಿಗೆ 3 ದಿನಗಳ ಒಳಗೆ ಕಾಲಮಿತಿಯಲ್ಲಿ ಸೇವೆ ನೀಡಲು ವಿಫಲರಾದಲ್ಲಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.