|

ಚಿತ್ರ ನಟರೂ ಆಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ #KumarBangarappa ಅವರು ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಗಾಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ #SocialMedia ತಮ್ಮ ಅಪ್ಡೇಟ್ ನೀಡುವ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರುವ ಕುಮಾರ್ ಬಂಗಾರಪ್ಪ, ಈಗ ಹೊಸ ವಿಚಾರ ಹಂಚಿಕೊಂಡಿದ್ದಾರೆ.

ಹೊಸ ವರುಷದ ಆರಂಭದಲ್ಲಿಯೇ ಅವರು ಸಿನಿ ಚಟುವಟಿಕೆಯಲ್ಲಿ ಆಕ್ಟೀವ್ ಆಗಿದ್ದಾರೆ.

ಈ ಸಂಬಂಧ ಫೇಸ್ ಬುಕ್ ಫೇಸ್ ಬುಕ್’ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಕುಮಾರ್ ಬಂಗಾರಪ್ಪ ಟೆರರ್ ಸಿನಿಮಾದ #TerrorMovie ಚಿತ್ರೀಕರಣ ಮುಕ್ತಾಯಗೊಂಡಿದ್ದು, ಹೊಸ ವರ್ಷದ ಮೊದಲನೇ ದಿನ ಅದರ ಡಬ್ಬಿಂಗ್ ಕಾರ್ಯ ಮಾಡಲಾಯಿತು ಎಂದಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜನ್, ಲೂಪ್ ಸ್ಟುಡಿಯೋ ಮಾಲೀಕರು, ಸಾಧುಕೋಕಿಲ ಅವರ ಮಗನಾದ ಸೂರಾಗ್ ಇದ್ದರು ಎಂದು ಬರೆದುಕೊಂಡಿದ್ಧಾರೆ.

By admin

ನಿಮ್ಮದೊಂದು ಉತ್ತರ

error: Content is protected !!